ಡಿ.5-6 : ಎಸ್ಸೆಸ್ಸೆಫ್ ಮುದುಂಗಾರು ಕಟ್ಟೆ ಶಾಖೆ 25 ನೇ ವಾರ್ಷಿಕೋತ್ಸವ

ಮುಡಿಪು: ಎಸ್ಸೆಸ್ಸೆಫ್ ಮುದುಂಗಾರು ಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುವ ಮಾಸಿಕ ಬುರ್ದಾ ಮಜ್ಲಿಸ್ ನ 25 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.5, ಮತ್ತು 6 ರಂದು ಮುದುಂಗಾರು ಕಟ್ಟೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಡಿ. 5ರಂದು ಫಾರೂಕ್ ನಈಮಿ ಕೊಲ್ಲಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಿ.6 ರಂದು ಹಾಫಿಝ್ ಅನ್ವರಲಿ ಸಖಾಫಿ ಶಿರಿಯಾ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಮುದುಂಗಾರು ಕಟ್ಟೆ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Next Story





