ದೇರಳಕಟ್ಟೆ: ಮೇಲ್ತೆನೆ ಇ-ಮ್ಯಾಗಝಿನ್ ಬಿಡುಗಡೆ

ದೇರಳಕಟ್ಟೆ: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್ – ಕಲಾವಿದಮಾರೊ ಕೂಟ) ವತಿಯಿಂದ ಹೊರತಂದ ಮೇಲ್ತೆನೆ ಇ-ಮ್ಯಾಗಝಿನ್ ಬಿಡುಗಡೆ ಕಾರ್ಯಕ್ರಮವು ರವಿವಾರ ನಾಟೆಕಲ್ ವಿಜಯನಗರದಲ್ಲಿರುವ ಇಲೈಟ್ ಟ್ಯೂಶನ್ ಸೆಂಟರ್‌ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಅಧ್ಯಕ್ಷ ಮಂಗಳೂರು ರಿಯಾಝ್, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ. ಇಬ್ರಾಹಿಂ ನಡುಪದವು, ಉಪಾಧ್ಯಕ್ಷ ಇಬ್ರಾಹಿಂ ರಫೀಕ್ ಮುದುಂಗಾರುಕಟ್ಟೆ, ಜೊತ ಕಾರ್ಯದರ್ಶಿ ಸಿ.ಎಂ. ಶರೀಫ್ ಪಟ್ಟೋರಿ ಉಪಸ್ಥಿತರಿದ್ದರು.
ಇದಲ್ಲದೆ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಯೂಸುಫ್ ವಕ್ತಾರ್, ಅಬೂಬಕ್ಕರ್ ಹೂಹಾಕುವಕಲ್ಲು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story





