ದೇರಳಕಟ್ಟೆ | ಮದ್ರಸ ಮಕ್ಕಳೊಂದಿಗೆ ಪೊಲೀಸರ ಚರ್ಚಾಕೂಟ

ದೇರಳಕಟ್ಟೆ:ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ ಮದ್ರಸ, ಅಡ್ಕರೆಪಡ್ಪು–ಬೆಳ್ಮ ಇದರ ಆಶ್ರಯದಲ್ಲಿ, ಪ್ರವಾದಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರ 1,500ನೇ ಜನ್ಮದಿನಾಚರಣೆಯ ಅಂಗವಾಗಿ ಪೊಲೀಸರೊಂದಿಗೆ ಮದ್ರಸ ಮಕ್ಕಳ ವಿಶೇಷ ಚರ್ಚಾಕೂಟ ನಡೆಯಿತು.
ಕೊಣಾಜೆ ಠಾಣಾ ಸಬ್ ಇನ್‌ಸ್ಪ ಕ್ಟರ್ ನಾಗರಾಜ ಎಸ್. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಗಾಂಜಾ–ಆಫೀಮು–ಅಮಲು ಪದಾರ್ಥಗಳ ಹಾನಿ, ಹದಿಹರೆಯದ ಮಕ್ಕಳ ವಾಹನ ಚಾಲನೆ, ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೊಣಾಜೆ ಠಾಣಾ ಪೊಲೀಸರು, ಜಮಾಅತ್ ಖತೀಬ್ ಮುಹಮ್ಮದ್ ಹಿಕಮಿ, ಮುಖ್ಯಾಧ್ಯಾಪಕ ಹನೀಫ್ ಸಅದಿ, ಅಧ್ಯಾಪಕರಾದ ಕೆ.ಎಚ್. ಇಸ್ಮಾಈಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ, ಜಮಾಅತ್ ಅಧ್ಯಕ್ಷ ಜಾಫರ್, ಕಾರ್ಯದರ್ಶಿ ಮುಸ್ತಫ, ಖಜಾಂಚಿ ಮುಹಮ್ಮದ್, ಉಸ್ತುವಾರಿ ಎ.ಬಿ. ಹುಸೈನ್, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಹೈದರ್, ಜೊತೆಗೆ ಅನೇಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ಮತ್ತು ಆಹಾರ ತರಗತಿ, ಹಳೆ ವಿದ್ಯಾರ್ಥಿ ಸಂಗಮ, ಹಿರಿಯರೊಂದಿಗೆ ಸ್ನೇಹ ಸಂಗಮ, ಮದ್ರಸ ಮಕ್ಕಳ ಮೀಲಾದ್ ಸಂಗಮ, ಎಫ್.ಎ. ಬಾಕ್ಸ್ ಉದ್ಘಾಟನೆ, ಕೈ ಬರಹ ಮಾಸಿಕ ಬಿಡುಗಡೆ ಮುಂತಾದ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಿತು.







