ದೇರಳಕಟ್ಟೆ: ಮಹಿಳಾ ಆರೋಗ್ಯ ಶಿಬಿರ ಉದ್ಘಾಟನೆ

ಕೊಣಾಜೆ: ಮಹಿಳೆಯರ ಆರೋಗ್ಯ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯವಿಲ್ಲದೆ ದೇಹ ಸದೃಢವಾಗಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾದರೆ, ಅದರ ಪರಿಣಾಮ ಸಂಪೂರ್ಣ ಕುಟುಂಬದ ಮೇಲೆ ಬೀಳುತ್ತದೆ ಎಂದು ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ಆಡಳಿತ ನಿರ್ದೇಶಕ ಫಾ.ಫಾಸ್ಟಿನ್ ಲೂಕಸ್ ಲೋಬೊ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸ್ತ್ರೀ ಆಯೋಗ ಹಾಗೂ ಕೆಥೋಲಿಕಾ ಸ್ತ್ರೀ ಸಂಘಟನೆ , ದಕ್ಷಿಣ ವಲಯ , ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ, ಹಳೆಯ ವಿದ್ಯಾರ್ಥಿಗಳ ಅಸೋಸಿಯೇಶನ್ , ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಸಹ ಯೋಗದೊಂದಿಗೆ ದೇರಳಕಟ್ಟೆಯ ಫಾದರ್ ಮುಲ್ಲರ್ ಆಡಿಟೋರಿಯಂನಲ್ಲಿ ಜರಗಿದ ಬೃಹತ್ ಮಹಿಳಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರೋಗ್ಯಕ್ಕೆ ಗಮನಕೊಟ್ಟಾಗ ಮಾತ್ರ, ಇಡೀ ಸಮಾಜ ಆರೋಗ್ಯವಾಗಿರಲು ಸಾಧ್ಯ. ಆದುದರಿಂದ ಮಹಿಳೆಯರ ಆರೋಗ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡೋಣ. ಈ ನಿಟ್ಟಿನಲ್ಲಿ ಸಂಸ್ಥೆ ಹಾಗೂ ವಿವಿಧ ಸಂಘಗಳ ಸಹಯೋಗದೊಂದಿಗೆ ಆಯೋಜಿಸಲಾದ ಆರೋಗ್ಯ ಶಿಬಿರ ಮಹಿಳೆಯರ ಆರೋಗ್ಯ ಸುಧಾರಣೆಗೆ ಸಹಖಾರಿಯಾಗಲಿ ಎಂದು ಹಾರೈಸಿದರು.
ವರಡೋ ನಿರ್ದೇಶಕ ಫಾ.ಜೋಸೆಫ್ ಮಸ್ಕರೇನಸ್ , ಸ್ತ್ರೀ ಆಯೋಗ ಮತ್ತು ಕೆಥೊಲಿಕ್ ಸ್ತ್ರೀ ಸಂಘಟನೆ ವಲಯ ಕಾರ‍್ಯದರ್ಶಿ ಅನಿತಾ ಫ್ರ್ಯಾಂಕ್ , ಬೆಳ್ಮ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಜಗದೀಶ್ ರೈ, ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿಗಳ ಅಸೋಸಿಯೇಷನ್ ಪ್ರಧಾನ ಕಾರ‍್ಯದರ್ಶಿ ಅಶ್ರಫ್ ಡಿ.ಎ , ನಿತ್ಯಾಧರ್ ಪಾಲನಾ ಸಮಿತಿ ಅಧ್ಯಕ್ಷೆ ಲಿನೆಟ್ ಕ್ಯಾಸ್ಟಲಿನೋ, ರಾಣಿಪುರ ಚರ್ಚ್ ಕರ‍್ಯದರ್ಶಿ ಲಿಡ್ವಿನ್ ಲೋಬೋ, ಪೆರ್ಮನ್ನೂರು ಚರ್ಚ್ ಸಮಿತಿ ಉಪಾಧ್ಯಕ್ಷೆ ಪ್ರಮೀಲಾ ಡಿಸೋಜ, ಪಜೀರು ಚರ್ಚ್ ಸಹ ಕಾರ್ಯದರ್ಶಿ ಆಶಾ ಫೆರ್ನಾಂಡಿಸ್ , ಅಮ್ಮೆಂಬಳ ಕೋಶಾಧಿಕಾರಿ ಟ್ರೆಸ್ಸಿ ರಾಡ್ರಿಗಸ್, ಸುನಿತಾ ವಿಜಯಡ್ಕ ಉಪಸ್ಥಿತರಿದ್ದರು.
ಡಾ. ದೀಪಾ ಪಾಯಸ್ ಶಿಬಿರ ಕುರಿತು ಮಾಹಿತಿ ನೀಡಿದರು ಫಾ.ಡೊನಾಲ್ಡ್ ದಿಲೇಶ್ ಕ್ರಾಸ್ತ ಸ್ವಾಗತಿಸಿದರು. ಡಾ.ಸುಶ್ಮಿತಾ ನಾಯರ್ ನಿರೂಪಿಸಿದರು.







