ದೇರಳಕಟ್ಟೆ | ರಂಜಾನ್ ಪ್ರಯುಕ್ತ ಸ್ವಚ್ಛತಾ ಆಂದೋಲನ

ದೇರಳಕಟ್ಟೆ : ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ರಂಜಾನ್ ಉಪವಾಸದ ಪ್ರಯುಕ್ತ ʼಸ್ವಚ್ಛತಾ ಆಂದೋಲನ ಕಾರ್ಯಕ್ರಮʼ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಹಾಸೀಮ್ ಬಂಡಸಾಲೆ ಅವರು, ನಮ್ಮ ಆರೋಗ್ಯ ಕಾಪಾಡಲು ಮೊದಲು ಸ್ವಚ್ಚತೆ ಇರಬೇಕು. ಹಿತ್ತಲಿನಲ್ಲಿ ಮತ್ತು ರಸ್ತೆ ಬದಿ ಕಂಡು ಬರುವ ಕಸವನ್ನು ತೆರವುಗೊಳಿಸುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಗೌರವ ಅಧ್ಯಕ್ಷ ಪಿ.ಎಸ್ ಮೊಯ್ದಿನ್ ಕುಂಞಿ, ಸದಸ್ಯ ಅಬ್ದುಲ್ ರಝಾಕ್ ಶಾಲಿಮಾರ್, ಸದಸ್ಯ ಇಕ್ಬಾಲ್ ಹುಬ್ಬಳ್ಳಿ, ಅಶ್ರಫ್ ಗರಡಿ ಉಪಸ್ಥಿತರಿದ್ದರು.
Next Story