ಧರ್ಮಸ್ಥಳ ಪ್ರಕರಣ | 13ನೇ ಸ್ಥಳದಲ್ಲಿ ಜಿಪಿಆರ್ ಶೋಧದ ಬಳಿಕ ಉತ್ಖನನ ಆರಂಭ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಗುರುತಿಸಿರುವ 13ನೇ ಜಾಗದಲ್ಲಿ ಜಿಪಿಆರ್ ಶೋಧ ಕಾರ್ಯಾಚರಣೆಯ ಬೆನ್ನಲ್ಲೇ ಎಸ್ಐಟಿ ಅಗೆಯುವ ಕಾರ್ಯವನ್ನು ಆರಂಭಿಸಿದೆ.
ಜಿಪಿಆರ್ ಮೂಲಕ ನಡೆಸಿದ ಸ್ಥಳದಲ್ಲಿ ಮಧ್ಯಾಹ್ನದ ಬಳಿಕ ಹಿಟಾಚಿ ಬಳಸಿ ಉತ್ಖನನ ನಡೆಸಲಾಗುತ್ತಿದೆ.
ಈ ಪ್ರದೇಶದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ದೂರುದಾರ ಈ ಹಿಂದೆ ಎಸ್ಐಟಿಗೆ ಮಾಹಿತಿ ನೀಡಿದ್ದ,
ಇದೀಗ ಅಧಿಕಾರಿಗಳ ತಂಡ ಸಾಕ್ಷಿದಾರನ ಉಪಸ್ಥಿತಿಯಲ್ಲಿ ಅಗೆಯುವ ಕಾರ್ಯ ಆರಂಭಿಸಿದೆ.
Next Story





