ಧರ್ಮಸ್ಥಳ ಪ್ರಕರಣ; ಎಸ್‌ಐಟಿಯಿಂದ ಗ್ರಾಮ ಪಂಚಾಯತ್‌ನ ನಾಲ್ವರು ಮಾಜಿ ಅಧ್ಯಕ್ಷರ ವಿಚಾರಣೆ

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ ಸಂಬಂಧ ಎಸ್ ಐ ಟಿ ವಿಚಾರಣೆ ಮುಂದುವರಿದಿದ್ದು ಅಧಿಕಾರಿಗಳು ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ನೋಟೀಸ್ ನೀಡಿದ್ದು ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ನಾಲ್ಕು ಮಂದಿ ಮಾಜಿ ಅಧ್ಯಕರಾದ ಕೇಶವ್ ಬೆಳಾಲ್ , ಪ್ರಭಾಕರ ಪೂಜಾರಿ , ಗೀತಾ,ಹಾಗೂ ಚಂದನ್ ಕಾಮತ್ ಇವರು ಸೆ.29 ರಂದು ಎಸ್.ಐ.ಟಿ ವಿಚಾರಣೆ ಹಾಜರಾಗಿದ್ದಾರೆ.
ಈ ನಾಲ್ಕು ಮಂದಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯುಡಿಆರ್ ಪ್ರಕರಣದಲ್ಲಿ ಶವ ಹೂತ ಬಗ್ಗೆ ಬಿಲ್ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತನಿಖೆಗಾಗಿ ಕರೆಸಿರುವುದಾಗಿ ತಿಳಿದು ಬಂದಿದೆ.
Next Story





