ಧರ್ಮಸ್ಥಳ: ಎಸ್ಐಟಿ ಕಚೇರಿಗೆ ಬಂದು ತಲುಪಿದ ದೂರುದಾರ ಜಯಂತ್

ಬೆಳ್ತಂಗಡಿ; ಶನಿವಾರ ರಾತ್ರಿಯ ವೇಳೆ ಎಸ್.ಐ.ಟಿ ಕಚೇರಿಗೆ ಬಂದು ದೂರು ನೀಡಲು ಮುಂದಾಗಿದ್ದ ಜಯಂತ್ ಟಿ ಅವರು ಎಸ್.ಐ.ಟಿ ಅಧಿಕಾರಿಗಳ ಸೂಚನೆಯಂತೆ ಸೋಮವಾರ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ದೂರು ನೀಡಲು ಆಗಮಿಸಿದ್ದಾರೆ.
ಕಚೇರಿಯಲ್ಲಿ ಇವರು ಯಾವ ದೂರನ್ನು ನೀಡಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಶನಿವಾರ ಮಾದ್ಯಮಗಳಿಗೆ ಮಾಹಿತಿ ನೀಡಿದ ಜಯಂತ್ ಟಿ, ತಾನು ಬಾಲಕಿಯ ಮೃತದೇಹವನ್ನು ನೋಡಿದ್ದೆ. ಹಾಗೂ ಯಾವುದೇ ರೀತಿಯ ಕಾನೂನು ಪ್ರಕ್ರಿಯೆ ನಡೆಸದೆ ಮೃತದೇಹವನ್ನು ಹೂತು ಹಾಕಲಾಗಿದೆ ತಿಳಿಸಿದ್ದರು. ಇದೀಗ ಇವರು ಅಧಿಕೃತವಾಗಿ ದೂರು ನೀಡಲು ಬಂದಿದ್ದಾರೆ. ಎಸ್.ಐ.ಟಿ ಕಚೇರಿಯಲ್ಲಿ ದೂರು ಸ್ವೀಕರಿಸುತ್ತಾರೋ ಅಥವಾ ದೂರನ್ನು ಪೊಲೀಸ್ ಠಾಣೆಯಲ್ಲಿ ನೀಡಲು ಸೂಚಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ.
Next Story





