ಧರ್ಮಸ್ಥಳ ದೂರು| ಎರಡನೇ ದೂರುದಾರನ ದೂರೂ ಎಸ್ ಐ ಟಿ ಗೆ ಹಸ್ತಾಂತರ: ದ.ಕ. ಎಸ್ಪಿ ಡಾ. ಅರುಣ್

ಬೆಳ್ತಂಗಡಿ, ಆ.5: ಧರ್ಮಸ್ಥಳ ಗ್ರಾಮದಲ್ಲಿ ಪೊಲೀಸರು ಪ್ರಕರಣ ದಾಖಲಿಸದೆ ಬಾಲಕಿಯ ಮೃತದೇಹವೊಂದನ್ನು ಹೂತು ಹಾಕಿರುವುದಾಗಿ ಧರ್ಮಸ್ಥಳ ಠಾಣೆಗೆ ನೀಡಿದ್ದ ಎರಡನೇ ದೂರುದಾರನ ದೂರನ್ನು ಎಸ್ ಐ ಟಿ ಗೆ ಹಸ್ತಾಂತರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ದೂರನ್ನು ಎಸ್ ಐ ಟಿ ಗೆ ಹಸ್ತಾಂತರಿಸುವಂತೆ ರಾಜ್ಯ ಪೊಲೀಸ್ DGP & IGP ಅವರು ಆದೇಶ ನೀಡಿರುವುದರಿಂದ, ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಎಸ್.ಐ.ಟಿ ನಡೆಸಲಿದೆ ಎಂದು ಎಸ್ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.
Next Story





