ಧರ್ಮಸ್ಥಳ ದೂರು | ಮೂರು ಬಕೆಟ್ ಗಳನ್ನು ಸೀಲ್ ಮಾಡಿ ಹೊರತಂದ ಎಸ್ ಐ ಟಿ; ಕುತೂಹಲ ಮೂಡಿಸಿದ ಕಾರ್ಯಾಚರಣೆ

ಬೆಳ್ತಂಗಡಿ; ಎಸ್.ಐ.ಟಿ ತಂಡದವರು ಸೋಮವಾರ ನೇತ್ರಾವತಿ ಸ್ನಾನಘಟ್ಟದ ಸಮೀಪ ಸಾಕ್ಷಿ ದೂರುದಾರನೊಂದಿಗೆ ಕಾರ್ಯಾಚರಣೆ ಪೂರ್ಣಗೊಳಿಸಿ ಹಿಂತಿರುಗಿದ್ದಾರೆ.
ಇಂದಿನ ಕಾರ್ಯಾಚರಣೆ ಅರಣ್ಯದ ಒಳ ಭಾಗದಲ್ಲಿ ನಡೆದಿದ್ದು, ಅಲ್ಲಿ ಕಳೆಬರ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಸ್ಥಳದಿಂದ ದೊರೆತಿರುವ ಕಳೆಬರಗಳ ಅವಶೇಷಗಳನ್ನು ಸೀಲ್ ಮಾಡಿ ಹೊರತಂದಿದ್ದಾರೆ.
ಮೂರು ಬಕೆಟ್ ಗಳನ್ನು ಸೀಲ್ ಮಾಡಿ ಹೊರತಂದಿದ್ದು ಮತ್ತೊಂದು ಸೀಲ್ ಮಾಡಿದ ಉದ್ದದ ಪ್ಯಾಕ್ ಅನ್ನು ಹೊರತರಲಾಗಿದೆ.
ಸೋಮವಾರ ದೊರೆತ ಕಳೆಬರಗಳ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಇಂದು ಸಾಕ್ಷಿ ದೂರುದಾರ ಗುರುತಿಸಿದ 11ನೆಯ ಸ್ಥಳಬಿಟ್ಟು ಅರಣ್ಯದ ಭಾಗದಲ್ಲಿ ಆತ ತೋರಿಸಿದ ಜಾಗದಲ್ಲಿ ಅಗೆಯುವ ಕಾರ್ಯ ನಡೆದಿತ್ತು. ಇಲ್ಲಿ ಲಭ್ಯವಾಗಿರುವುದು ಒಂದೇ ಮೃತದೇಹದ ಭಾಗಗಳೇ ಅಥವಾ ಒಂದಕ್ಕಿಂದ ಹೆಚ್ಚು ಮೃತದೇಹಗಳ ಭಾಗಗಳಿವೆಯೇ ಎಂಬುದು ವಿಧಿ ವಿಜ್ಞಾನ ಪ್ರಯೊಗಾಲಯಗಳ ಪರೀಕ್ಷೆಯಿಂದಷ್ಟೆ ತಿಳಿದು ಬರಬೇಕಾಗಿದೆ.
Next Story







