ಧರ್ಮಸ್ಥಳ| ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: ಎಫ್‌ಎಸ್‌ಎಲ್ ವರದಿ ಸಲ್ಲಿಕೆ ?

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಮೊದಲು ಎಸ್.ಐ.ಟಿ ಅಧಿಕಾರಿಗಳು ಪತ್ತೆ ಮಾಡಿದ್ದ ಎರಡು ಮಾನವನ ಅಸ್ಥಿಪಂಜರಗಳು ಮತ್ತು ಚಿನ್ನಯ್ಯ ತಂದ ತಲೆಬರುಡೆಯ ಎಫ್ಎಸ್ಎಲ್ ವರದಿ ಬಂದಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಶೋಧದ ವೇಳೆ ಆರನೇ ಗುರುತು ಮಾಡಿದ ಜಾಗದಲ್ಲಿ ಪತ್ತೆಯಾದ ತಲೆಬುರುಡೆ ಸಹಿತ ಅಸ್ಥಿಪಂಜರ 25-30 ವರ್ಷ ವಯಸ್ಸಿನ ಪುರುಷನದ್ದಾಗಿದೆ ಹಾಗೂ 11-A ಗುರುತು ಮಾಡಿದ ಜಾಗದಲ್ಲಿ ಭೂಮಿಯ ಮೇಲ್ಭಾಗ ದಲ್ಲಿ ಪತ್ತೆಯಾದ ತಲೆಬುರುಡೆ ಸಹಿತ ಅಸ್ಥಿಪಂಜರ 35-39 ವರ್ಷ ವಯಸ್ಸಿನ ಪುರುಷನದ್ದು ಎಂದು ಎಫ್ಎಸ್ಎಲ್ ವರದಿ ಎಸ್.ಐ.ಟಿ ಅಧಿಕಾರಿಗಳಿಗೆ ನೀಡಿರುವುದಾಗಿ ತಿಳಿದುಬಂದಿದೆ.
ಇನ್ನೂ ಆರೋಪಿ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ತಲೆಬುರುಡೆ 40 ವರ್ಷದ ಪುರುಷನದ್ದು ಎಂದು ಎಫ್ಎಸ್ಎಲ್ ವರದಿಯಲ್ಲಿ ಮಾಹಿತಿ ಲಭ್ಯವಾಗಿದೆ.
Next Story





