ಧರ್ಮಸ್ಥಳ| ಬಾಹುಬಲಿ ಬೆಟ್ಟದಲ್ಲಿ ಕಾರ್ಯಾಚರಣೆ ಅಂತ್ಯ

ಧರ್ಮಸ್ಥಳ: ಗ್ರಾಮದ ಬಾಹುಬಲಿ ಬೆಟ್ಟದಲ್ಲಿ ದಿನವಿಡಿ ನಡೆದ ಕಾರ್ಯಾಚರಣೆ ಕೊನೆಗೊಂಡಿದ್ದು ಸ್ಥಳದಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ಸಾಕ್ಷಿ ದೂರುದಾರ ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟಕ್ಕೆ ಎಸ್.ಐ.ಟಿ ತಂಡವನ್ನು ಕರೆ ತಂದಿದ್ದು, ಮಧ್ಯಾಹ್ನದ ವೇಳೆ ಬಾಹುಬಲಿ ಬೆಟ್ಟದ ರಸ್ತೆಯ ಬದಿಯಲ್ಲಿ ಕಾರ್ಯಾಚರಣೆ ಆರಂಭಿಸಿದರು. 16ನೆಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅದು ಮುಗಿದ ಬಳಿಕ ಅದರ ಸಮೀಪವೇ ಮತ್ತೊಂದು ಸ್ಥಳದಲ್ಲಿಯೂ ಅಗೆಯುವ ಕಾರ್ಯ ನಡೆಸಿದರು ಆದರೆ ಅಲ್ಲಿಯೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಸಂಜೆ ಆರುವರೆ ಗಂಟೆಯ ಸುಮಾರಿಗೆ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





