ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಪುಣ್ಯಸ್ಮರಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿದೇಶಗಳಿಗೆ ಹೋದಾಗ ಮಹಾತ್ಮ ಗಾಂಧಿ ಅವರನ್ನು ಕೊಂಡಾಡು ತ್ತಾರೆ. ಆದರೆ ಅವರು ನಮ್ಮ ದೇಶದಲ್ಲಿ ಗಾಂಧಿ ಹೆಸರಿಗೆ ಅಪಚಾರ ಮಾಡುತ್ತಾರೆ. ಇದು ಹಿಪೊಕ್ರೆಸಿಯ ಒಂದು ಭಾಗ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡುತ್ತಿದ್ದರು.
ಗಾಂಧೀಜಿ ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆ ಯಿತು. ಪ್ರಪಂಚದಾದ್ಯಂತ ಬಾಪು ಅವರ ಜೀವನ ಮಾದರಿಯಾಗಿದೆ. ವಿವಿಧ ದೇಶಗಳು ಮಹಾತ್ಮ ಗಾಂಧಿಯ ಸ್ಮರಣಾರ್ಥವಾಗಿ ಪ್ರತಿಮೆಗಳನ್ನು ನಿರ್ಮಿಸಿ ಅವರನ್ನು ಶಾಂತಿ, ಮಾನವೀಯತೆ ಮತ್ತು ಅಹಿಂಸೆಯ ಸಂಕೇತ ವೆಂದು ಗೌರವಿಸುತ್ತಿವೆ. ಆದರೆ ಇಲ್ಲಿ ಮೋದೀಜಿಯ ಶಿಷ್ಯರು ಗಾಂಧಿ ಪ್ರತಿಮೆಗೆ ಬೆಂಕಿ, ಗುಂಡು ಹಾರಿಸಿ ಅವಮಾನಿಸುತ್ತಿರುವುದು ಖಂಡನೀಯ ಎಂದರು.
ಕೇಂದ್ರ ಬಿಜೆಪಿ ಸರಕಾರದ ಹೊಸ ಕಾಯ್ದೆಯು ಮನರೇಗಾ ಯೋಜನೆಯಲ್ಲಿದ್ದ ಗಾಂಧೀಜಿಯ ಪ್ರಧಾನ ಆಶಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ದುರ್ಬಲಗೊಳಿಸಿದೆ. ಬಿಜೆಪಿ ನಿತ್ಯವೂ ಗಾಂಧಿ ಚಿಂತನೆಗಳನ್ನು ಕೊಲ್ಲುತ್ತಿದೆ ಎಂದು ರಮಾನಾಥ ರೈ ಹೇಳಿದರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಪಕ್ಷದ ಮುಖಂಡರಾದ ಪದ್ಮರಾಜ್ ಆರ್.ಪೂಜಾರಿ, ಎಸ್. ಅಪ್ಪಿ, ದಿನೇಶ್ ಮುಳೂರು, ಕೆ.ಹರಿನಾಥ್, ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಟಿ.ಕೆ. ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಹುಸೈನ್, ಯೋಗೀಶ್ ಕುಮಾರ್, ಸಾರಿಕ ಪೂಜಾರಿ, ಇಬ್ರಾಹೀಂ ನವಾಝ್, ಜೋಕಿಂ ಡಿಸೋಜ, ಅಬ್ಬಾಸ್ ಅಲಿ, ಶೈಲಜಾ ಬಂಟ್ವಾಳ, ಸ್ಟ್ಯಾನಿ ತಾವ್ರೊ, ಸುಹಾನ್ ಆಳ್ವ, ಸೌಹಾನ್ ಎಸ್.ಕೆ., ಸೀತಾರಾಮ ಶೆಟ್ಟಿ, ಬಿ.ಎಸ್. ಇಸ್ಮಾಯೀಲ್ ತಲಪಾಡಿ, ಲಕ್ಷ್ಮಿ ನಾಯರ್, ಸತೀಶ್ ಪೆಂಗಲ್, ಬಶೀರ್, ಜಾರ್ಜ್, ಸಬಿತಾ ಮಿಸ್ಕಿತ್, ಶಾಂತಲಾ ಗಟ್ಟಿ, ಅವಿತಾ, ಕ್ಲೆಟಾ, ಆಲ್ವಿನ್ ಪ್ರಕಾಶ್, ಕೃಷ್ಣ ಶೆಟ್ಟಿ, ಮೋಹನ್‌ದಾಸ್ ಕೊಟ್ಟಾರಿ, ಟಿ.ಸಿ.ಗಣೇಶ್, ಸಮರ್ಥ ಭಟ್, ಫಯಾಝ್ ಅಮ್ಮೆಮ್ಮಾರ್, ಸನೋಬರ್ ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.







