"ಸುಲಭವಾಗಿ ಸಿಗೋ ಮರಳಿನ ಮೇಲೆ ಕೆಲವರ ಕಣ್ಣಿದೆ": ಅಕ್ರಮ ಮರಳುಗಾರಿಕೆ ಬಗ್ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ

ಮಂಗಳೂರು: ದ.ಕ ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ವಿಚಾರವಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಬೇಡಿಕೆ ಇದೆ, ಮತ್ತೊಂದು ಕಡೆ ಅಧಿಕೃತ ಮರಳು ತೆಗೆಯಲು ಅವಕಾಶ ಕೊಟ್ಟರೂ ತೆಗೀತಿಲ್ಲ. ಅಕ್ರಮ ಮರಳುಗಾರಿಕೆ ಎನ್ನುವುದು ಈ ವ್ಯವಸ್ಥೆಯಲ್ಲಿ ಇರೋ ಸಮಸ್ಯೆ. ಜಿಲ್ಲೆಯ ಗಣಿ ಅಧಿಕಾರಿ ವಿಚಾರವಾಗಿ ಮೈನ್ಸ್ ಮಿನಿಸ್ಟರ್ ಜೊತೆ ಮಾತನಾಡ್ತೀನಿ ಎಂದು ತಿಳಿಸಿದರು.
ಅಕ್ರಮ ಮರಳುಗಾರಿಕೆ ಇಂದು ನಿನ್ನೆಯ ಸಮಸ್ಯೆ ಅಲ್ಲ. ಸುಲಭವಾಗಿ ಸಿಗೋ ಮರಳಿನ ಮೇಲೆ ಕೆಲವರ ಕಣ್ಣಿದೆ. ಸೇತುವೆ ಹತ್ತಿರವೂ ಮರಳು ಬಿಟ್ಟಿಲ್ಲ ಅಂದ್ರೆ ಸೇತುವೆಗಳು ಶಿಥಿಲ ಗೊಳ್ಳುತ್ತವೆ. ಇದರಿಂದ ಕೋಟ್ಯಾಂತರ ರೂ. ನಷ್ಟ ಆಗ್ತದೆ. ಎಲ್ಲರೂ ಕೈ ಜೋಡಿಸಿದ್ರೆ ಇದನ್ನ ಸರಿ ಪಡಿಸಲು ಅವಕಾಶ ಇದೆ. ಈ ಬಗ್ಗೆ ಕೆಡಿಪಿ ಮೀಟಿಂಗ್ ನಲ್ಲಿ ಈ ಬಗ್ಗೆ ಇಲಾಖೆ ಜೊತೆ ಮಾತನಾಡ್ತೀನಿ ಎಂದರು.
Next Story





