ದ.ಕ. ಲೋಕಸಭಾ ಕ್ಷೇತ್ರ: 11 ಗಂಟೆ ವೇಳೆ 30.96 ಶೇ. ಮತದಾನ
ಮಂಗಳೂರು, ಎ.26: ಲೋಕಸಭೆ ಚುನಾವಣೆಗೆ ಸಂಬಂಧಿಸಿ ದ.ಕ. ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆಯುತ್ತಿರುವ ಮತದಾನ ಬಿರುಸಿನಿಂದ ಕೂಡಿದೆ. 11 ಗಂಟೆ ವೇಳೆ 30.96 ಶೇ. ಹಕ್ಕು ಚಲಾವಣೆಯಾಗಿದೆ.
11 ಗಂಟೆ ವೇಳೆಗೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 34.7 ಶೇ. ಮತದಾನವಾಗಿದ್ದರೆ, ಪುತ್ತೂರು 32.98 ಶೇ., ಬೆಳ್ತಂಗಡಿ 32.39 ಶೇ., ಬಂಟ್ವಾಳ- 32.28 ಶೇ., ಮಂಗಳೂರು 31.63 ಶೇ., ಮಂಗಳೂರು ನಗರ ಉತ್ತರ 30.39 ಶೇ., ಮೂಡುಬಿದಿರೆ 27.46 ಹಾಗೂ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 26.54 ಶೇ. ಮತದಾನವಾಗಿದೆ.
Next Story