ರುಕ್ಮಯ್ಯ ಯಂ.ಕಕ್ಯಪದವುರಿಗೆ ಡಾಕ್ಟರೇಟ್ ಪದವಿ

ಬಂಟ್ವಾಳ : ತಾಲೂಕಿನ ಉಳಿ ಗ್ರಾಮದ ರುಕ್ಮಯ್ಯ ಯಂ.ಕಕ್ಯಪದವು ಅವರಿಗೆ ಡಾಕ್ಟರೇಟ್ ಪದವಿ ಪುರಸ್ಕೃತರಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದಿಂದ ಕರ್ನಾಟಕದಲ್ಲಿ ಪ್ರಜಾ ತಾಂತ್ರಿಕ ಪ್ರಯೋಗ ಕರ್ನಾಟಕ ವಿಧಾನಸಭೆಯಲ್ಲಿ ದಲಿತ ಪ್ರಾತಿನಿಧ್ಯದ ಕುರಿತು ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪುರಸ್ಕೃತರಾಗಿದ್ದಾರೆ.
ಪರಿಶಿಷ್ಟ ಜಾತಿಯ ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಇವರು ಬಂಟ್ವಾಳದ ಉಳಿ ಗ್ರಾಮಕ್ಕೆ ಮೊದಲಿಗರಾಗಿ ಶೈಕ್ಷಣಿಕ ಸಾಧನೆ ಮಾಡಿದ್ದು ಇವರನ್ನು ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ ಅಭಿನಂದಿಸಿದೆ.
Next Story





