ಧರ್ಮಸ್ಥಳದ ಬಗ್ಗೆ ಬರುವ ಟೀಕೆಗಳ ಬಗ್ಗೆ ಯಾವುದೇ ಭಯ ಬೇಡ: ಡಿ.ಕೆ ಶಿವಕುಮಾರ್

ಬೆಳ್ತಂಗಡಿ: ಧರ್ಮಸ್ಥಳದ ಬಗ್ಗೆ ಬರುವ ಟೀಕೆಗಳ ಬಗ್ಗೆ ಯಾವುದೇ ಭಯ ಬೇಡ. ಟೀಕೆಗಳು ಸಾಯುತ್ತವೆ ನಾವು ಮಾಡುವ ಕಾರ್ಯಗಳು ಉಳಿಯುತ್ತವೆ. ಯಾವುದಕ್ಕೂ ಅಂಜುವ ಸಂದರ್ಭವೇ ಇಲ್ಲ. ನನ್ನತಂಹ ನೂರಾರು ಡಿಕೆ ಶಿವಕುಮಾರ್ ಗಳು ನಿಮ್ಮ ಹಿಂದೆ ನಿಲ್ಲಲು ಸಿದ್ದರಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಕಲ್ಯಾಣ ಮಂಟಪಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯದಾನ ಎಂಬ ಚತುರ್ದಾನಗಳು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ಬರೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಟೀಕೆ ಮಾಡುವುದು ಸುಲಭ. ಹೆಗ್ಗಡೆಯವರು ಜೈನರು, ದೇವಸ್ಥಾನ ಹಿಂದೂ ದೇವಸ್ಥಾನ ಎಂದು ಟೀಕಿಸುವವರನ್ನು ಖಂಡಿಸಿದ ಡಿ.ಕೆ.ಶಿ, ಇದಕ್ಕೆ ಹೆಗ್ಗಡೆಯವರು ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ತಮ್ಮ ಹಾಗೂ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.





