ಐಡಿಎ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷರಾಗಿ ಡಾ. ಜಗದೀಶ್ ಚಂದ್ರ ಅಧಿಕಾರ ಸ್ವೀಕಾರ

ಮಂಗಳೂರು, ಡಿ.30: ಮಂಗಳೂರಿನ ಯೆನೆಪೊಯ ದಂತ ಕಾಲೇಜಿನ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜಗದೀಶ್ ಚಂದ್ರ ಅವರು ದಕ್ಷಿಣ ಕನ್ನಡ ಶಾಖೆಯ ಭಾರತೀಯ ದಂತ ಸಂಘ (ಐಡಿಎ) ಅಧ್ಯಕ್ಷರಾಗಿ ಡಿ.26ರಂದು ಅಧಿಕಾರ ವಹಿಸಿಕೊಂಡರು.
ನಗರದ ಖಾಸಗಿ ಹೋಟೆನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಡಾ. ಜಗದೀಶ್ ಚಂದ್ರ ಅವರು ತಮ್ಮ ಶಿಕ್ಷಕರು, ಸಹೋದ್ಯೋಗಿಗಳು ಮತ್ತು ಐಡಿಎ ಭ್ರಾತೃತ್ವದ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸಹೋದ್ಯೋಗಿಗಳು ಡಾ. ಚಂದ್ರ ಅವರನ್ನು ಅಭಿನಂದಿಸಿದರು.
Next Story





