ಸಖಾಫಿ ಕೌನ್ಸಿಲ್‌ನಿಂದ ಮೌಲಿದ್ ಮಜ್ಲಿಸ್‌ಗೆ ಚಾಲನೆ

ಮಂಗಳೂರು: ಜಾಮಿಆ ಮರ್ಕಝ್ ಕಲ್ಲಿಕೋಟೆ ಇದರ ಕರ್ನಾಟಕದ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ಕರ್ನಾಟಕ ಸಖಾಫಿ ಕೌನ್ಸಿಲ್‌ನ ಕಾರ್ಯಕಾರಿಣಿ ಸಭೆ ಹಾಗೂ ಮಾದರಿ ಮೌಲಿದ್ ಮಜ್ಲಿಸ್‌ಗೆ ಕುಕ್ಕಾಜೆಯ ಅಶ್ಹರಿಯ ಕಾಟೇಜ್‌ನಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್ಹರಿಯ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ ಕಾಮಿಲ್ ಸಖಾಫಿ ಪೆರ್ನೆ ದುಆಗೈದರು. ರಾಜ್ಯ ಸಖಾಫಿ ಕೌನ್ಸಿಲ್ ಕೋಶಾಧಿಕಾರಿ ಸೈಯ್ಯಿದ್ ಇಲ್ಯಾಸ್ ತಂಳ್ ಎರುಮಾಡ್ ಉದ್ಘಾಟಿಸಿದರು.
ಸಭೆಯಲ್ಲಿ ಸಖಾಫಿಗಳ ಹಾಗೂ ಮರ್ಕಝಿನ ಉನ್ನತಿಗಾಗಿ ನಾಲ್ಕು ಉಪಸಮಿತಿಗಳನ್ನು ರಚಿಸಲಾಯಿತು. ಸೈಯ್ಯಿದ್ ಶಿಹಾಬುದ್ದೀನ್ ತಂಳ್ ಮದಕ, ಸೈಯ್ಯಿದ್ ಮುಷ್ತಾಕ್ ತಂಳ್, ಶೈಖುನಾ ವಾಲೆಮುಂಡೊವು ಉಸ್ತಾದ್, ಬೊಳ್ಮಾರ್ ಉಸ್ತಾದ್, ರಾಜ್ಯ ಸಖಾಫಿ ಕೌನ್ಸಿಲ್ ಗೌರವಾಧ್ಯಕ್ಷ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ನ ಮತ್ತಿತರರು ಉಪಸ್ಥಿತರಿದ್ದರು.
ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್ ಸ್ವಾಗತಿಸಿದರು. ಕಾರ್ಯದರ್ಶಿ ಉಸ್ಮಾನ್ ಸಖಾಫಿ ವಂದಿಸಿದರು.





