ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋನ್ ವತಿಯಿಂದ ನಶೆ ಮುಕ್ತ ಸಮಾಜ ಅಭಿಯಾನ

ಸುರತ್ಕಲ್: ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋನ್ ಇದರ ಆಶ್ರಯದಲ್ಲಿ ಬೃಹತ್ ಆದರ್ಶ ಸಮ್ಮೇಳನ ಹಾಗೂ ನಶೆ ಮುಕ್ತ ಸಮಾಜ ಅಭಿಯಾನವು ಶುಕ್ರವಾರ ರಾತ್ರಿ ಕೃಷ್ಣಾಪುರ ಕೇಂದ್ರ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೃಷ್ಣಾಪುರ ಮುಸ್ಲಿಂ ಜಮಾಅತ್ ನ ಖಾಝಿ ಅಲ್ ಹಾಜ್ ಇ. ಕೆ. ಇಬ್ರಾಹಿಂ ಮದನಿ ಅವರು ಉದ್ಘಾಟಿಸಿದರು.
ಸುನ್ನೀ ಜಂಇಯ್ಯತುಲ್ ಉಲಮಾದ ಸುರತ್ಕಲ್ ಝೋನ್ ಅಧ್ಯಕ್ಷ ಎ. ಪಿ. ಅಬ್ದುಲ್ಲ ಮದನಿ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಜೆ.ಎಂ. ಕಾಟಿಪಳ್ಳ ರೇಂಜ್ ಅಧ್ಯಕ್ಷ ಅಸ್ಸಯ್ಯದ್ ಝೈನುಲ್ ಆಬಿದೀನ್ ಅಲ್‌ಹಾದೀ ತಂಙಳ್ ದುಆ ನೆರವೇರಿಸಿದರು.
ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋಮ್ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಕಮಿ ಅವರು ಸ್ವಾಗತ ಭಾಷಣ ಗೈದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾದ ಅಲವಿ ಸಖಾಫಿ ಕೊಳತ್ತೂರು ಅವರು “ಆಹ್ವುಸ್ಸುನ್ನ ವಲ್ ಜಮಾಅ:” ವಿಷಯದ ಕುರಿತು ಮುಖ್ಯ ಪ್ರಭಾಷಣ ಗೈದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಫಿಲ್ ಸುಫ್ಯಾನ್ ಸಖಾಫಿ, ಮೂಡಬಿದ್ರೆ ಅವರು “ಅಮಲು ಪದಾರ್ಥಗಳ ದುಷ್ಪರಿಣಾಮಗಳು” ಕುರಿತು ಉಪನ್ಯಾಸ ನೀಡಿದರು.
ಮಾಜಿ ಶಾಸಕ ಮೊಯ್ದಿನ್ ಬಾವ, ಮುಹಮ್ಮದ್ ಆಲಿ ರೂಮಿ, ಕೃಷ್ಣಾಪುರ ಬದ್ರಿಯಾ ಜುಮ್ ಮಸ್ಜಿದ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಝಾಕಿರ್ ಹುಸೈನ್, ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ರಹ್ಮತುಲ್ಲಾ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್, ಮಂಗಳ ಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ, ಎಸ್.ಎಮ.ಎ. ಕಾಟಿಪಳ್ಳ ರೀಜನಲ್ ಅಧ್ಯಕ್ಷ ಸಿ. ಅಬ್ದುಲ್ ಹಮೀದ್ ಮಂಗಳಪೇಟೆ, ಕೃಷ್ಣಾಪುರ ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಕ್, ಕೃಷ್ಣಾಪುರ ಬದ್ರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಟಿ. ಎಂ., ಸುರತ್ಕಲ್ ಝೋನ್ ಸುನ್ನಿ ಜಂಇಯ್ಯತುಲ್ ಉಲಮಾದ ಕಾರ್ಯಾಧ್ಯಕ್ಷ ಕೆ. ಕೆ. ಮುಹಹಿಯುದ್ದೀನ್ ಕಾಮಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಆತ್ ನ ಸುರತ್ಕಲ್ ಝೋನ್ ಅಧ್ಯಕ್ಷ ಲುಕ್ಮಾನಿಯಾ ಇಸ್ಮಾಈಲ್ ಮುಸ್ಲಿಯಾರ್, ಎಸ್.ವಿ. ಎಸ್. ಸುರತ್ಕಲ್ ಝೋನ್ ಅಧ್ಯಕ್ಷ ಅಬ್ದುನ್ನಾಸಿರ್ ಮದನಿ ಸೂರಿಂಜೆ, ಎಸ್.ಜೆ.ಎಂ. ಸುರತ್ಕಲ್ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ಮದನಿ, ಎಸ್.ಜೆ.ಎಂ.ಕಿನ್ನಿಗೋಳಿ ರೇಂಜ್ ಅಧ್ಯಕ್ಷ ಇಬ್ರಾಹೀಂ ಫಾಳಲಿ, ಎಸ್.ಎಂ.ಎ. ಸುರತ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್, ಎಸ್.ಎಂ.ಎ. ಸುರತ್ಕಲ್ ರೀಜನಲ್ ಅಧ್ಯಕ್ಷ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಎಸ್.ಎಂ.ಎ. ಕಿನ್ನಿಗೋಳಿ ರೀಜನಲ್ ಅಧ್ಯಕ್ಷ ಅಬ್ದುರಝಾಕ್ ಮುಕ್ಕ, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ಅಧ್ಯಕ್ಷ ಅಬ್ದುರಶೀದ್ ಸಅದಿ ಅಂಗರಗುಂಡಿ, ಕೃಷ್ಣಾಪುರ ಕೇಂದ್ರ ಅಲ್ ಮದ್ರಸತುಲ್ ಬದ್ರಿಯಾದ ಅಧ್ಯಕ್ಷ ಅಬ್ದುಲ್ ಹಕೀಂ ಫಾಲ್ಕನ್, ಕೃಷ್ಣಾಪುರ ತ್ವಯಿಬಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ತಾಜ್ ಫಿಶ್, ಮಸ್ಜಿದುಲ್ ಹುದಾ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ಮಸ್ಜಿದುಲ್ ಹುದಾ ಅಧ್ಯಕ್ಷ ಅಬ್ದುಲ್ ಖಾದಿರ್, ಮೈಂದಗುರಿ ನೂರುಲ್ ಇಸ್ಲಾಂ ಜುಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಹನೀಫ್, ಮುಕ್ಕ ಜುಮಾ ಮಸೀದಿಯ ಅಧ್ಯಕ್ಷ ಕೆ. ಎಂ. ಹಸನ್, ಕೋಟೆ ಆಯಿಷಾ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಅಬ್ದುಲ್ ರಝಾಕ್, ಬದ್ರಿಯಾ ನಗರ ಮಸ್ಜಿದುನ್ನೂರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಶರೀಫ್, ಕುಳಾಯಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಮ್ಮಿಯಾಝ್ ಅಹ್ಮದ್, ಅನ್ಸಾರಿಯಾ ಜುಮಾ ಮಸೀದಿಯ ಅಧ್ಯಕ್ಷ ಝುಬೈರ್, ಜನತಾ ಕಾಲನಿ ಶಾಝುಲಿ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಅಶ್ರಫ್, ಗುತ್ತಕಾಡು ಖಿಲ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಟಿ.ಎ. ಹನೀಫ್, ಪುನರೂರು ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ, ಕಾನ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್, ಸುರತ್ಕಲ್ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಸೂರಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ಎ. ಜಲೀಲ್, 62ನೇ ತೋಕೂರು ಜುಮಾ ಮಸೀದಿಯ ಅಧ್ಯಕ್ಷ ಎಂ. ಮಯ್ಯದ್ದಿ, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ನೂರಾನಿಯ, ಎಸ್.ಕೋಡಿ ಇಖ್ಲಾಸ್ ಜುಮಾ ಮಸೀದಿಯ ಅಧ್ಯಕ್ಷ ರಿಝ್ವಾನ್, ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ರಫೀಕ್ ಪ್ಲವರ್, ಸಸಿಹಿತ್ಲು ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್, 10ನೇ ತೋಕೂರು ಜಾಮಿಯಾ ಮೊಹಲ್ಲಾ ನೂರುಲ್ ಹುದಾ ಅರೇಬಿಕ್ ಮದ್ರಸದ ಅಧ್ಯಕ್ಷ ಟಿ. ಎಂ. ಹಸನಬ್ಬ, ಚೇಳಾಯರು ಖುವ್ವತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಮುಹಮ್ಮದ್, ಸ್ವಾತ ಸಮಿತಿಯ ಚೆಯರ್ ಮೆನ್ ಎಂ.ಎಸ್. ಶರೀಫ್ ಕೃಷ್ಣಾಪುರ, ಚೀಫ್ ಕನ್ವೀನರ್ ಉಮರುಲ್ ಫಾರೂಖ್ ಸಖಾಫಿ, ಫೈನಾಲ್ಸ್ ಕನ್ವೀನರ್ ಸ್ವಾದಿಕ್ ಈದ್ಗಾ ಮೊದಲಾದವರು ಉಪಸ್ಥಿತರಿದ್ದರು.
ಬೃಹತ್ ಆದರ್ಶ ಸಮ್ಮೇಳನ ಹಾಗೂ ನಶೆ ಮುಕ್ತ ಸಮಾಜ ಅಭಿಯಾನದ ಪ್ರಯುಕ್ತ ಸಂಜೆಯ ವೇಳೆ 30 ಮದ್ರಸಗಳ ಮಕ್ಕಳಿಂದ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಕಾಲ್ನಡಿಗೆ ಜಾಥಾ ನಡೆಯಿತು.
ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಬೃಹತ್ ಪರದೆಯ ಮೂಲಕ ವಿವರಣೆ ಹಾಗೂ ಪ್ರತಿಜ್ಞಾ ಬೋಧನೆ ನಡೆಯಿತು.







