ಪರಿಣಾಮಕಾರಿ ಕಾನೂನು ಕ್ರಮಗಳ ಮೂಲಕ ಮಾದಕ ಜಾಲ ನಿಯಂತ್ರಣ ಸಾಧ್ಯ -ಅಬ್ದುಲ್ ಅಝೀಮ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ನಿಯಂತ್ರಣಕ್ಕೆ ಬಿಗಿಯಾದ ಕಾನೂನು ಕ್ರಮಗಳನ್ನು ಜಾರಿ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದ್ದಾರೆ.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ತಾನು ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹಿನ್ನಲೆಯಲ್ಲಿ ತನ್ನ ಅನುಭವದ ಪ್ರಕಾರ ಮಾದಕ ಜಾಲವನ್ನು ನಿಯಂತ್ರಣಕ್ಕೆ ಪ್ರಮಾಣಿಕ ಅಧಿಕಾರಿಗಳು ಮತ್ತು ಪರಿಣಾ ಮಕಾರಿಯಾದ ಕಾನೂನು ಕ್ರಮಗಳ ಅಗತ್ಯವಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಪೊಲೀಸ್ ಮತ್ತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ಅಝೀಮ್ ತಿಳಿಸಿದ್ದಾರೆ.
ಮಾದಕ ಜಾಲದಲ್ಲಿ ತೊಡಗಿರುವ ಒಬ್ಬ ವ್ಯಕ್ತಿ ಯನ್ನು ಹಿಡಿದು ಆತನ ಮೇಲೆ ಮಾತ್ರ ಪ್ರಕರಣ ದಾಖಲಿಸುವ ಬದಲು ಆತನ ಜೊತೆ ಶಾಮೀಲಾಗಿರುವ ಎಲ್ಲರ ಮೇಲೂ ಪ್ರಕರಣ ದಾಖಲಿಸಿದಾಗ ಇಡೀ ಜಾಲದ ಮೇಲೆ ಹತೋಟಿ ಸಾಧ್ಯ ಈ ರೀತಿ ಮಾಡಿದಾಗ ಜಿಲ್ಲೆ ಯಲ್ಲೂ ನಿಯಂತ್ರಣ ಸಾಧ್ಯ. ಪ್ರಸ್ತುತ ಜಾಲದಲ್ಲಿ ತೊಡಗಿರುವ ಒಬ್ಬ ನನ್ನು ಮಾತ್ರ ಹಿಡಿದು ಪ್ರಕರಣ ದಾಖಲಿಸಿದರೆ ಆತನ ಜೊತೆ ಇರುವ ಇತರರು ಈ ಜಾಲವನ್ನು ಮುಂದುವರಿಸಲು ಸಹಾಯ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಮುಂದಿನ ಬಜೆಟ್ ನಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಸೀಮಿತ ವಾಗಿ ವಕ್ಫ್ ಆಸ್ತಿ ಸಂರಕ್ಷಣೆಗೆ ಪ್ರತ್ಯೇಕ ವಿಭಾಗದ ರಚನೆಗೆ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಅಝೀಮ್ ಹೇಳಿದ್ದಾರೆ. ವಕ್ಫ್ ಆಸ್ತಿ ರಕ್ಷಣೆ ಗೆ ವಿಶೇಷ ಕಾರ್ಯ ಪಡೆ ರಚಿಸಬೇಕು, ಅಲ್ಪ ಸಂಖ್ಯಾತರಿಗೆ ಸಾಲ ನೀಡಲು ನಿಯಗಳನ್ನು ಸರಳಗೊಳಿಸಬೇಕು. ಅಲ್ಪ ಸಂಖ್ಯಾತರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಲು ಸರಕಾರಕ್ಕೆ ಆಯೋಗದ ಮೂಲಕ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ದಫನ ಭೂಮಿ ಸಮಸ್ಯೆ ಇರುವ ಕಡೆ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಫುವಿನ ಆಧಾರದಲ್ಲಿ ಸರಕಾರ ಭೂಮಿ ಖರೀದಿಸಿ ಒದಗಿಸಿಕೊಡಬೇಕಾಗಿದೆ. ಮೌಲನಾ ಅಝಾದ್ ಆಂಗ್ಲ ಮಾಧ್ಯಮ ಶಾಲೆ, ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ತೆರೆಯಲಾದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸರಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಅಲ್ಪ ಸಂಖ್ಯಾತರ ಆಯೋಗದ ವಿಶೇಷ ಕರ್ತವ್ಯ ಅಧಿಕಾರಿ ಮುಝಿಬುಲ್ಲಾ ಝಫಾರಿ, ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.







