ಸಾಮಾಜಿಕವಾಗಿ ತೊಡಗಿಕೊಳ್ಳುವುದು ಯುವಜನರ ಕರ್ತವ್ಯ: ರವಿ ನಾಯಕ್
“ಯುವಜನ ಹಬ್ಬ- ಕರ್ತವ್ಯ ಪಾಲನೆಗಾಗಿ ಯುವಜನ ಅಭಿವ್ಯಕ್ತಿ” ಕಾರ್ಯಕ್ರಮ

ಮಂಗಳೂರು: ಸಂವಾದ ಯುವ ಸಂಪನ್ಮೂಲ ಕೇಂದ್ರ ಮಂಗಳೂರು, ಯುವ ಮುನ್ನಡೆ ತಂಡ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ “ಯುವಜನ ಹಬ್ಬ- ಕರ್ತವ್ಯ ಪಾಲನೆಗಾಗಿ ಯುವಜನ ಅಭಿವ್ಯಕ್ತಿ” ಕಾರ್ಯಕ್ರಮವು ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕರಾದ ರವಿ ವೈ. ನಾಯಕ್ ಅವರು ಯುವ ಜನರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು, ಸಂವಾದ ಸಂಸ್ಥೆ ಯುವ ಜನರ ಜೊತೆ ಈ ನೆಲೆಯಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಷಯ ಎಂದರು.
ಯುವಜನರ ಸಂವಿಧಾನ ಬದ್ಧ ಮೂಲಭೂತ ಸೌಕರ್ಯಗಳು, ಯುವಜನರ ಆರೋಗ್ಯ, ಲಿಂಗ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿ ವಿಚಾರಗಳ ಗೋಷ್ಠಿಯನ್ನು ಯುವ ಜನರು ನಡೆಸಿಕೊಟ್ಟರು. ಯುವ ಮುನ್ನಡೆಯ ಒಡನಾಡಿಗಳು ಯುವ ಜನರ ಸಮಸ್ಯೆಗಳ ಕುರಿತು ಮಾಡಿದ ಅಧ್ಯಯನದ ವಿಷಯವನ್ನು ಮಂಡಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಲೇಖಕಿ, ಚಿಂತಕಿ ಗುಲಾಬಿ ಬಿಳಿಮಲೆ ಯುವಜನರು ಅಧ್ಯಯನವನ್ನು ಕೈಗೊಳ್ಳುವುದು ಅತ್ಯವಶ್ಯಕ, ಯಾವುದೇ ವಿಚಾರಗಳನ್ನು ಸಂಶೋಧನಾತ್ಮಕವಾಗಿ ಅರಿತುಕೊಳ್ಳುವುದು ಅಗತ್ಯ. ವಿಶ್ಲೇಷಣಾತ್ಮಕವಾಗಿ ವಿಚಾರಗಳನ್ನು ತಿಳಿದುಕೊಳ್ಳುವುದು ಪ್ರಜ್ಞಾವಂತ ನಾಗರಿಕನ ಜವಾಬ್ದಾರಿ ಎಂದು ಅವರು ಮಾತನಾಡಿದರು.
ಜನಪ್ರೀತಿ ಬಳಗದ ಹಾಡು, ಬಹುತ್ವದ ಗೀತರೂಪಕ, ಸಂವಾದದ ಯುವ ಒಡನಾಡಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಳು, ಜರ್ನಿ ಥೇಟರ್ ಗ್ರೂಪ್ ಇವರಿಂದ ನಾಟಕ ಜರುಗಿದವು. ಸಂತ ಅಲೋಶಿಯಸ್ ಕಾಲೇಜಿನ ರೆ.ಫಾ. ಮೆಲ್ವಿನ್ ಜೆ ಪಿಂಟೊ, ಡಾ.ನಾಗರತ್ನ ಕೆ.ಎ, ಎನ್.ಎಸ್. ಎಸ್ ಕಾರ್ಯಕ್ರಮ ಸಂಯೋಜಕರು ಉಪಸ್ಥಿತರಿದ್ದರು.
ಸಂವಾದ ಸಂಸ್ಥೆಯ ಮಂಜುಳಾ ಸುನೀಲ್ ಸ್ವಾಗತಿಸಿದರು, ಪವಿತ್ರಾ ಜ್ಯೋತಿಗುಡ್ಡೆ ವಂದಿಸಿದರು.







