ಎಮ್ಮೆಕೆರೆ ಮೈದಾನ: ಈಡೇರಿದ ಬೇಡಿಕೆ; ನ.19ರ ಪ್ರತಿಭಟನೆ ವಾಪಸ್
ಮಂಗಳೂರು: ಎಮ್ಮೆಕೆರೆ ಮೈದಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ.ಖಾದರ್ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನ.19ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ ಎಂದು ಎಮ್ಮೆಕೆರೆ ಮೈದಾನ ಹೋರಾಟ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ದಿನಕರ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಮ್ಮೆಕೆರೆ ಮೈದಾನಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯವನ್ನು ಶೀಘ್ರವಾಗಿ ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಸಮಿತಿಯು ಪ್ರತಿಭಟನೆ ಮಾಡಲು ನಿರ್ಧರಿಸಿತ್ತು. ಆದರೆ ಇಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮ್ಮುಖ ಮೈದಾನದ ಅಭಿವೃದ್ಧಿಗೆ 2 ಕೋ.ರೂ.ವನ್ನು ಮೀಸಲಿಟ್ಟಿರುವ ಬಗ್ಗೆ ತಿಳಿಸಿದರು.
ಅಲ್ಲದೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಮೈದಾನದ ಅಭಿವೃದ್ಧಿಗೆ ಸಂಬಂಧಿಸಿ ಈ ಹಿಂದೆ ನೀಡಿದ ಭರವಸೆಯನ್ನು ಈಡೇರಿಸುವುದಾಗಿ ದೂರವಾಣಿ ಕರೆ ಮಾಡಿ ಭರವಸೆ ನೀಡಿದರು. ಮೇಯರ್ ಸುಧೀರ್ ಶೆಟ್ಟಿ ಕೂಡ ಕರೆ ಮಾಡಿ ಮೈದಾ ನದ ಅಭಿವೃದ್ಧಿ ವಿಚಾರದಲ್ಲಿ ಮಹಾನಗರ ಪಾಲಿಕೆಯು ಸಾರ್ವಜನಿಕರ ಪರವಾಗಿದೆ ಎಂದು ಸ್ಪಷ್ಟಪಡಿಸಿದರು. ಹಾಗಾಗಿ ನ.19ರ ಪ್ರತಿಭಟನೆಯನ್ನು ವಾಪಸ್ ಪಡೆಯುವುದಾಹಿ ತಿಳಿಸಿದ್ದಾರೆ.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ತುಳುನಾಡ ರಕ್ಷಣೆ ವೇದಿಕೆಯ ಯೋಗೇಶ್ ಶೆಟ್ಟಿ ಜೆಪ್ಪು, ಸಮಿತಿಯ ನಾಯಕರಾದ ಅಮಿತ್ ಎಮ್ಮೆಕೆರೆ, ಹರ್ಷಿತ್ ಎಮ್ಮೆಕೆರೆ, ಸಮದ್ ಎಮ್ಮೆಕೆರೆ, ಜಾಕೀರ್, ಪ್ರಜ್ವಲ್ ಬೋಳಾರ, ದೀಕ್ಷಿತ್ ಅತ್ತಾವರ, ರಮಾನಂದ ಬೋಳಾರ, ದಿನೇಶ್ ಶಿವನಗರ, ಜಾನ್ ನೊರೊನ್ಹಾ, ರಮೇಶ್, ನೌಶಾದ್, ನಝೀರ್, ಫಿರೋಝ್, ಗೌತಮ್, ಸಾತ್ವಿಕ್, ವೈಷ್ಣವ್, ಮಹೇಶ್, ಸಚಿನ್ ಸುಭಾಷ್ ನಗರ, ರಕ್ಷಿತ್ ಸುಭಾಷ್ ನಗರ ಮತ್ತಿತರರು ಉಪಸ್ಥಿತರಿದ್ದರು.







