ಬಿಐಟಿಯಲ್ಲಿ “ಇಗ್ನೈಟಿಂಗ್ ಐಡಿಯಾಸ್” ಕಾರ್ಯಕ್ರಮ: ಉದ್ಯಮಶೀಲತೆಯ ಅವಕಾಶಗಳ ಕುರಿತು ಉಪನ್ಯಾಸ

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ ಐಇಇಇ ವಿದ್ಯಾರ್ಥಿ ವಿಭಾಗ ಹಾಗೂ IEEE ಮಂಗಳೂರು ಉಪವಿಭಾಗದ ಸಹಯೋಗದಲ್ಲಿ “ಇಗ್ನೈಟಿಂಗ್ ಐಡಿಯಾಸ್: ಅಪಾರ್ಚುನಿಟೀಸ್ ಇನ್ ಆಂತ್ರೋಪ್ರಿನರ್ಶಿಪ್” ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ಆ. 25ರಂದು ಬಿಐಟಿಯ ಅಂತರರಾಷ್ಟ್ರೀಯ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಪ್ರೊ.ಇಡ್ಯಾ ಕರುಣಾಸಾಗರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಉದ್ಯಮಶೀಲತೆಯ ಮಹತ್ವವನ್ನು ವಿವರಿಸಿದರು. ನವೀನ ಚಿಂತನೆ, ಅಪಾಯ ತೆಗೆದುಕೊಳ್ಳುವ ಧೈರ್ಯ ಹಾಗೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿ ಸುವ ಸಾಮರ್ಥ್ಯಗಳು ಯಶಸ್ವಿ ಉದ್ಯಮಶೀಲತೆಯ ಕೇಂದ್ರ ಬಿಂದುಗಳಾಗಿವೆ ಎಂದು ಅವರು ತಿಳಿಸಿದರು.
ಸುಸ್ಥಿರ ವೃತ್ತಿಜೀವನ ನಿರ್ಮಾಣ ಹಾಗೂ ಸಮಾಜದ ಪ್ರಗತಿಗೆ ಉದ್ಯಮಶೀಲ ಮನೋಭಾವನೆ ಮಹತ್ತರ ಪಾತ್ರ ವಹಿಸುತ್ತಿದೆ ಎಂಬುದನ್ನು ತಮ್ಮ ಉಪನ್ಯಾಸದಲ್ಲಿ ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಇಸಿಇ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ಅಬ್ದುಲ್ಲಾ ಗುಬ್ಬಿ ಅವರ ಸ್ವಾಗತಿಸಿದರು. ಇಸಿಇ ವಿಭಾಗದ ಅವ್ವಾಬಿ ನಿರೂಪಿಸಿದರು. ಅಫ್ರಿನ್ ಫಾತಿಮಾ ಅತಿಥಿಗಳನ್ನು ಪರಿಚಯಿಸಿದರು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಉದ್ಯಮ, ಲಭ್ಯವಿರುವ ಅವಕಾಶಗಳು ಹಾಗೂ ಭವಿಷ್ಯದ ವೃತ್ತಿ ಮಾರ್ಗಗಳ ಕುರಿತು ಆಳವಾದ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ಕಲ್ಪಿಸಲಾಗಿತ್ತು.







