ವಾಮಂಜೂರು ಅಣಬೆ ತಯಾರಿಕಾ ಘಟಕ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಪ್ರಕರಣ ದಾಖಲು

ವಾಮಂಜೂರು, ಆ.21: ವಾಮಂಜೂರು ಅಣಬೆ ತಯಾರಿಕಾ ಘಟಕದ ವಿರುದ್ಧ ಗುಂಪೊಂದು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಾ ಮುಗ್ದ ಸ್ಥಳೀಯರನ್ನು ಉದ್ರಿಕ್ತ ಪರಿಸ್ಥಿತಿ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಘಟಕದ ಮಾಲಕ ಜೆ.ಆರ್. ಲೋಬೊ ಅವರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಾಮಂಜೂರು ಬಳಿ ಮುನ್ಸಿಪಲ್ ಕಾರ್ಪೋರೇಷನ್ ಮತ್ತು Ministry of Micro, Small and Medium Enterprises Government of Indiaರಲ್ಲಿ Micro Unit ನಂತೆ ನೋಂದಣಿ ಮಾಡಿಕೊಂಡು ಅಣಬೆ ಬೆಳೆಯುವ ಜೊತೆಗೆ Horticulture Activity ಯನ್ನು ಕಳೆದ 2 ವರ್ಷಗಳಿಂದ ನಡೆಸುತ್ತಿದ್ದೇನೆ. ಇದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆದಿರುತ್ತೇನೆ, ಆದರೂ 2 ವರ್ಷಗಳಿಗೂ ಹೆಚ್ಚು ಕಾಲ ಯಾರ ಆಕ್ಷೇಪವಿಲ್ಲದೇ ಅಣಬೆ ಕೃಷಿ ಮಾಡಿಕೊಂಡು ಬಂದಿರುತ್ತೇನೆ. 2023ನೇ ಇಸವಿಯ ಫೆಬ್ರವರಿ ತಿಂಗಳಿನಲ್ಲಿ ರಾಜಕೀಯ ದ್ವೇಷದ ಬೆಂಬಲಿತ ಕೆಲವರು ರಾಸಾಯನಿಕ ಬಳಸುತ್ತಿದ್ದಾರೆ, ಸಾಗುವಳಿ ಪ್ರದೇಶ ದಿಂದ ದುರ್ವಾಸನೆ ಬರುತ್ತಿದೆ ಎಂದು ಸುಳ್ಳು ಆರೋಪಗಳನ್ನು ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯಿಂದ ವರದಿ ಪಡೆದ ಜಿಲ್ಲಾಧಿಕಾರಿಯವರು ಗೊಬ್ಬರ ಮುಚ್ಚುವ ಆದೇಶವನ್ನು ಹಿಂಪಡೆದು ಕಾಂಪೋಸ್ಟ್ ಗೆ ಅನುಮತಿ ನೀಡಿ ಅಣಬೆ ಕೃಷಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಆದರೆ, ಇತ್ತೀಚೆಗೆ ಒಂದು ಗುಂಪು ಹಲವಾರು ಸುಳ್ಳು ಮತ್ತು ಮಾನಹಾನಿಕಾರಕ ಲೇಖನಗಳನ್ನು ಸಾಮಾಜಿಕ ಜಾಲತಾಣ ಗಳಾದ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ಯು ಟ್ಯೂಬ್ ಗಳಲ್ಲಿ ಹರಿಯಬಿಡುತ್ತಿದ್ದಾರೆ. ನಮ್ಮ ಚಟುವಟಿಕೆಗಳಿಂದ ಯಾವುದೇ ಕೆಟ್ಟವಾಸನೆ ಉತ್ಪತ್ತಿಯಾಗುವುದಿಲ್ಲ. ಉದ್ದೇಶಪೂರ್ವಕವಾಗಿ ಸದರಿ ಸುಳ್ಳು ಸಂದೇಶ, ಸುದ್ದಿಗಳನ್ನು ಸ್ಥಳೀಯ ಮುಗ್ದ ಜನರು ನಂಬಿ ಉದ್ರಿಕ್ತ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜೆ.ಆರ್. ಲೋಬೊ ಅವರ ದೂರು ಆಧರಿಸಿ ನಗರ ಸೆನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







