ಫರಂಗಿಪೇಟೆ | ಅಮೆಮ್ಮಾರ್ ಬದ್ರಿಯಾ ಮಸೀದಿ ವತಿಯಿಂದ ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ನಡೆಯವ ಪ್ರತಿಭಟನೆಯ ಪ್ರಚಾರ ಸಭೆ

ಫರಂಗಿಪೇಟೆ : ಬದ್ರಿಯಾ ಜುಮಾ ಮಸೀದಿ ಅಮೆಮ್ಮಾರ್ ಆಡಳಿತ ಸಮಿತಿ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಬಿಲ್ ವಿರುದ್ದ ಎ.18 ರಂದು ಅಡ್ಯಾರ್ ಶಾ ಗಾರ್ಡನ್ ನಲ್ಲಿ ಉಲಮಾ ಕೋರ್ಡಿನೇಷನ್ ಆಯೋಜಿಸಿದ ಪ್ರತಿಭಟನೆಯ ಪ್ರಚಾರ ಸಭೆಯು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಸ್ವಾಲಿಹ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಅಮೆಮ್ಮಾರ್ ಜಂಕ್ಷನ್ ನಲ್ಲಿ ನಡೆಯಿತು
ಖತೀಬ್ ಅಬೂಬಕ್ಕರ್ ಸಿದ್ದೀಕ್ ಫೈಝಿ ದುವಾಗೈದು ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ಮಾತನಾಡಿ, ಎ.18 ರಂದು ನಡೆಯುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸತ್ತಾರ್ ಸಖಾಫಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಮರಕ್ಕೆ ಮುಸ್ಲಿಮರು ಮುಂಚೂಣಿಯಲ್ಲಿ ನಿಂತು ಒಗ್ಗಟ್ಟಿನಿಂದ ಹೋರಾಟ ನಡೆಸಿದ ಅದೇ ಹಾದಿಯಲ್ಲಿ ಈಗ ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ಹೋರಾಟ ಸಂಘಟಿಸಲಾಗುತ್ತದೆ. ಈ ಬಿಲ್ ಮುಸ್ಲಿಮರ ಅಸ್ಮಿತೆಯನ್ನು ಕಬಲಿಸುವ ಹುನ್ನಾರದ ಭಾಗವಾಗಿದೆ. ಇದನ್ನು ಜಾರಿಗೆ ತರಲು ಅನುಮತಿಸಬಾರದು ಎಂದು ಹೇಳಿದರು
ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶಾಫಿ ಅಮೆಮ್ಮಾರ್, ಸದಸ್ಯರಾದ ಬಶೀರ್ ತಂಡೇಲ್ ಈ ಸಂದರ್ಭದಲ್ಲಿ ಮಾತನಾಡಿದರು
ಮಸೀದಿ ಆಡಳಿತ ಸಮಿತಿ ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಸುಲೈಮಾನ್ ಉಸ್ತಾದ್, ಶಾಕಿರ್, ಪರ್ವೀಝ್, ಆಶ್ರಫ್, ಹೈದರ್, ಉಸ್ಮಾನ್, ಝುಬೇರ್, ರಜಾಕ್, ಮತ್ತಿತರರು ಉಪಸ್ಥಿತರಿದ್ದರು. ಶರೀಫ್ ಸ್ವಾಗತಿಸಿ ನಿರೂಪಿಸಿದರು