ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಆಡಳಿತಾಧಿಕಾರಿಯಾಗಿದ್ದ ಫಾದರ್ ಅಜಿತ್ ಮಿನೇಜಸ್‌ಗೆ ವಿದಾಯ

ಮಂಗಳೂರು, ಆ.2: ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಅಸೋಸಿಯೆಟ್ ಡೈರಕ್ಟರ್ ಆಗಿ ನೇಮಕಗೊಂಡಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಆಡಳಿತಾಧಿಕಾರಿ ರೆ.ಫಾ. ಅಜಿತ್ ಬೆಂಜಮಿನ್ ಮೆನೆಜಸ್ ಅವರಿಗೆ ವಿದಾಯ ಸಮಾರಂಭ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆಯಿತು.
ನಿರ್ಗಮನ ಆಡಳಿತಾಧಿಕಾರಿ ರೆ.ಫಾ. ಅಜಿತ್ ಬೆಂಜಮಿನ್ ಮಿನೇಜಸ್ ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಶಾಲು ಮತ್ತು ಹಾರವನ್ನು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಫಾ. ಡಾ. ಮೈಕೆಲ್ ಸಾಂತುಮೇಯರ್ ಅವರು ಫಾದರ್ ಅಜಿತ್ ಮಿನೇಜಸ್ ರಿಂದ ಅವರಿಂದ ಕಾಲೇಜು ಕಡತಗಳನ್ನು ಸ್ವೀಕರಿಸಿದರು.
ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ. ಡಾ. ಫಾದರ್ ಫೌಸ್ಟಿನ್ ಲೂಕಸ್ ಲೋಬೊ ಅವರು ಫಾದರ್ ಅಜಿತ್ ಅವರ ನಿರಂತರ ಕೊಡುಗೆಗಳು ಮತ್ತು ಆಧ್ಯಾತ್ಮಿಕ ನಾಯಕತ್ವವನ್ನು ಪ್ರತಿಬಿಂಬಿಸಿ ದರು. ಫಾದರ್ ಅಜಿತ್ ಅವರು, ತಮ್ಮ ಪ್ರಯಾಣವನ್ನು ರೂಪಿಸಿದ ಎಲ್ಲ ಮಾಜಿ ನಿರ್ದೇಶಕರು ಮತ್ತು ಆಡಳಿತಗಾರರಿಗೆ, ವಿಶೇಷವಾಗಿ ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ತುಂಬೆ ಕ್ಯಾಂಪಸ್‌ನ ಆಡಳಿತಾಧಿಕಾರಿ ಫಾ.ಸಿಲ್ವೆಸ್ಟರ್ ಲೋಬೊ, ಎಚ್‌ಪಿಡಿಯ ಆಡಳಿತಾಧಿಕಾರಿ ಫಾ. ನೆಲ್ಸನ್ ಪೈಸ್, ಹೋಮಿಯೋಪತಿ ಮತ್ತು ಫಾರ್ಮಸಿ ಕಾಲೇಜುಗಳ ಆಡಳಿತಾಧಿಕಾರಿ ಫಾ. ನಿಲೇಶ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ ಫಾ. ವಿಲಿಯಂ ಡಿ ಸೋಜ , ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಆ್ಯಂಟನಿ ಸಿಲ್ವಾನ್ ಡಿ ಸೋಜ , ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲ ಡಾ. ಹಿಲ್ಡಾ ಡಿ ಸೋಜ , ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಪ್ರೊ. ಚೆರಿಷ್ಮಾ ಡಿ ಸಿಲ್ವಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ ಕುಮಾರ್, ಹೆಚ್ಚುವರಿ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶ್ ಬಿ.ಎಂ, ಮತ್ತು ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಪೈಸ್ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವಿರಾ ಸ್ವಾಗತಿಸಿದರು., ಪ್ರೊಫೆಸರ್ ಮತ್ತು ಮನೋವೈದ್ಯಶಾಸ್ತ್ರದ ಮುಖ್ಯಸ್ಥೆ ಡಾ. ಸುಪ್ರಿಯಾ ಅರೂರ್ ಹೆಗ್ಡೆ , ನರ್ಸಿಂಗ್ ಅಧಿಕಾರಿ ಸಿ. ನ್ಯಾನ್ಸಿ ಮ್ಯಾಥ್ಯೂಸ್ ವಂದಿಸಿದರು.
ಕಾರ್ಯಕ್ರಮವನ್ನು ದಾಖಲಾತಿ ಕಚೇರಿಯ ಅಧೀಕ್ಷಕಿ ಐಡಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.







