ಫರ್ಡಿನೆಂಡ್ ಕಿಟ್ಟೆಲ್ ಸಾಕ್ಷ್ಯ ಚಿತ್ರ ಪ್ರದರ್ಶನ

ಮಂಗಳೂರು, ನ.26: ವಿಶ್ವ ಪರಂಪರೆಯ ಸಪ್ತಾಹದ ಸಮಾರೋಪ ಕಾರ್ಯಕ್ರಮವಾಗಿ ಕನ್ನಡದ ಮೊಟ್ಟ ಮೊದಲನೆಯ ನಿಘಂಟುಕಾರ ಫರ್ಡಿನಾಂಡ್ ಕಿಟ್ಟೆಲ್ ಅವರ ಜೀವನ ಚರಿತ್ರೆ ಕುರಿತಾದ ಸಾಕ್ಷ್ಯ ಚಿತ್ರ ‘ದಿ ವರ್ಡ್ ಅಂಡ್ ದಿ ಟೀಚರ್ ’ ಪ್ರದರ್ಶನವನ್ನು ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ ಇಂಟಾಕ್ ಮಂಗಳೂರು ವಿಭಾಗ ಮತ್ತು ಆರ್ಟ್ ಕೆನರಾ ಟ್ರಸ್ಟ್ ಆಶ್ರಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕರ್ನಾಟಕ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಮಾಜಿ ಆರ್ಕೈವಿಸ್ಟ್ ಮತ್ತು ಚಿತ್ರಕ್ಕೆ ಸಹಕಾರ ನೀಡಿರುವ ಬೆನೆಟ್ ಅಮ್ಮಣ್ಣ ,ಸಾಕ್ಷ್ಯ ಚಿತ್ರದ ನಿರ್ದೇಶಕ ಪ್ರಶಾಂತ್ ಪಂಡಿತ್ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕಿ ಸ್ವಾತಿ ಆಚಾರ್ಯ ಭಾಗವಹಿಸಿದ್ದರು.
ಇಂಟಾಕ್ ನ ಸದಸ್ಯ ದೀಕ್ಷಿತ್ ಆರ್. ಪೈ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ‘ನಮ್ಮ ಊರು ನಮ್ಮ ನೆಲ’ ಕಲಾ ಪ್ರದರ್ಶನವು ನವೆಂಬರ್ 29 ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರ ತನಕ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಮುಂದುವರಿಯಲಿದೆ.







