ದಾರುನ್ನೂರ್ ದಶಮಾನೋತ್ಸವ ಮತ್ತು ಸನದುದಾನ ಸಮ್ಮೇಳನ ಸ್ವಾಗತ ಸಮಿತಿ ರಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ರವರಿಂದ 2012- 2013 ರಲ್ಲಿ ಮರ್ಹೂಂ ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ಹೆಸರಿನಲ್ಲಿ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಬೆಳ್ತಂಗಡಿ ಇದರ ದಶಮಾನೋತ್ಸವ ಮತ್ತು ಪ್ರಥಮ ಸನದುದಾನ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಸ್ವಾಗತ ಸಮಿತಿ ರಚನೆಯ ಬಗ್ಗೆ ಮಂಗಳೂರಿನ ಹೋಟೆಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಇತ್ತೀಚೆಗೆ ಸಭೆ ನಡೆಯಿತು.
ಸಭೆಯು ತ್ವಾಖ ಅಹ್ಮದ್ ಮುಸ್ಲಿಯಾರ್ ರವರ ದುಆದೊಂದಿಗೆ ಪ್ರಾರಂಭವಾಯಿತು. ದಾರುನ್ನೂರ್ ವಿದ್ಯಾರ್ಥಿ ಹರ್ಷದ್ ಕಿರಾಅತ್ ಪಠಿಸಿದರು.
ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೊಡಿಜಾಲ್ ಸ್ವಾಗತಿಸಿದರು. ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ತೋಡಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಶಮಾನೋತ್ಸವ ಮತ್ತು ಸನದುದಾನ ಸಮ್ಮೇಳನವನ್ನು 2024 ಮೇ ತಿಂಗಳಿನಲ್ಲಿ ಅದ್ದೂರಿ ಯಾಗಿ ನಡೆಸುವುದಾಗಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಅನಿವಾಸಿ ಉದ್ಯಮಿ ಮತ್ತು ಸಂಸ್ಥೆಯ ಗೌರವ ಅಧ್ಯಕ್ಷರಾದ ಮೊಹಮ್ಮದ್ ಶರೀಫ್ ಹಾಜಿ ವೈಟ್ ಸ್ಟೋನ್ ವಹಿಸಿದ್ದರು. ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಉದ್ಯಮಿಗಳು, ದಾನಿಗಳನ್ನು ಸಂಸ್ಥೆಯ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಸಭೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಅಧ್ಯಕ್ಷರಾದ ರಫೀಕ್ ಅಹ್ಮದ್ ಕೋಲಾರಿ ಹಿತವಚನಗಳನ್ನು ನೀಡಿ ಶುಭ ಹಾರೈಸಿದರು. ದಾರುನ್ನೂರ್ ಎಜುಕೇಷನ್ ಸೆಂಟರ್ ನಿರ್ದೇಶಕರು ಹಾಗೂ ಮುಸ್ಲಿಂ ಸೆಂಟ್ರೆಲ್ ಕಮಿಟಿಯ ಅಧ್ಯಕ್ಷ ರಾದ ಅಲ್ ಹಾಜ್ ಕೆ. ಎಸ್. ಮೊಹಮ್ಮದ್ ಮಸೂದ್, ಅನಿವಾಸಿ ಉದ್ಯಮಿ ಶಾರ್ಜಾದ ಪೆಟ್ರೋ ಸೊಲ್ಯೂಷನ್ ಕಂಪನಿಯ ಆಡಳಿತ ನಿರ್ದೇಶಕರಾದ ಮತೀನ್ ಅಹ್ಮದ್ ಚಿಲ್ಮಿ, ದಾರುನ್ನೂರ್ ಯು.ಎ ಇ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷರಾದ ರಫೀಕ್ ಸುರತ್ಕಲ್, ದಾರುನ್ನೂರ್ ರಿಯಾದ್ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಸಯ್ಯದ್ ಶಾಹುಲ್ ಹಮೀದ್ ತಂಙಲ್, ದಕ್ಶಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಇರ್ಷಾದ್ ದಾರಿಮಿ ಮಿತ್ತಬೈಲ್, ಹುಸೇನ್ ದಾರಿಮಿ ರೇಂಜಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನಿವಾಸಿ ಉದ್ಯಮಿ ಮತೀನ್ ಅಹ್ಮದ್ ಚಿಲ್ಮಿ, ಯು.ಎ ಇ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ರಫೀಕ್ ಸುರತ್ಕಲ್, ದಾರುನ್ನೂರ್ ರಿಯಾದ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಯ್ಯದ್ ಶಾಹುಲ್ ಹಮೀದ್ ತಂಙಲ್ ಹಾಗೂ ಸಂಸ್ಥೆಯ ಗೌರವ ಅಧ್ಯಕ್ಷರಾದ ಶರೀಫ್ ಹಾಜಿ ವೈಟ್ ಸ್ಟೋನ್ ಅವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದಾರುನ್ನೂರ್ ಸಂಸ್ಥೆಯ ದಶಮಾನೋತ್ಸವ ಮತ್ತು ಸನದುದಾನ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲು ಸ್ವಾಗತ ಸಮಿತಿ ರಚಿಸಲಾಯಿತು.
ಚೈರ್ಮ್ಯಾನ್ : ಶರೀಫ್ ಹಾಜಿ ವೈಟ್ ಸ್ಟೋನ್.
ವೈಸ್ ಚೈರ್ಮ್ಯಾನ್: ಹಾಜಿ ಇಬ್ರಾಹಿಂ ಕೊಡಿಜಾಲ್, ಅಬ್ದುಲ್ ಸಮದ್ ಹಾಜಿ HBT.
ಕೋಶಾಧಿಕಾರಿ: ಉಸ್ಮಾನ್ ಹಾಜಿ ಏರ್ ಇಂಡಿಯಾ ತೊಡಾರ್.
ಪ್ರಧಾನ ಸಂಚಾಲಕರು: ಹಾಜಿ ಮೊಹಮ್ಮದ್ ಬಪ್ಪಳಿಗೆ.
ಸಂಚಾಲಕರು: ಅಬ್ದುಲ್ ರೆಹಮಾನ್ ಹಾಜಿ ಹಾಸ್ಕೋ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಮೊಹಮ್ಮದ್ ಹನೀಫ್ ಹಾಜಿ ಬಂದರ್, ಸಯ್ಯದ್ ಶಾಲಿ ತಂಙಲ್, ಅದ್ದು ಹಾಜಿ, ಫಕೀರಬ್ಬ ಮಾಸ್ಟರ್, ಅಮೀನ್ ಹುದವಿ, ಹುಸೇನ್ ರಹ್ಮಾನಿ, ಎಂ. ಜಿ ಮೊಹಮ್ಮದ್ ಹಾಜಿ ತೋಡಾರ್ ಇವರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಕೇಂದ್ರ ಸಮಿತಿ ಪದಾಧಿಕಾರಿಗಳು, ಗಲ್ಫ್ ಸಮಿತಿಯ ಪದಾಧಿಕಾರಿಗಳು, ಸಂಸ್ಥೆಯ ಹಿತೈಷಿಗಳು, ದಾನಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಸಮದ್ HBT ಧನ್ಯವಾದ ಸಲ್ಲಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







