ಪ್ರತಿಭಾ ಕಾರಂಜಿ : ಸೂರಲ್ಪಾಡಿ ಅಲ್ ಖೈರ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಮಂಗಳೂರು, ನ.12 : ಸೂರಲ್ಪಾಡಿಯ ಅಲ್ ಖೈರ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಮಳಲಿ ಶಾಲೆಯಲ್ಲಿ ನಡೆದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಮೆರೆದಿದ್ದು, ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಕಿರಿಯ ವಿಭಾಗ (1 ರಿಂದ 4ನೇ ತರಗತಿ) :
ಉಮ್ಮಿ ಅಯಿಝ (ಚಿತ್ರಕಲೆ – ಪ್ರಥಮ), ಮುಹಮ್ಮದ್ ಶಾಹಿದ್ ಹಿಶಾಮ್ ( ಕ್ಲೇ ಮಾಡಲಿಂಗ್ – ಪ್ರಥಮ), ಆಯಿಷ ಸನಾಝ್ – (ಧಾರ್ಮಿಕ ಪಠಣ (ಅರೇಬಿಕ್) – ಪ್ರಥಮ).
ಹಿರಿಯ ವಿಭಾಗ (5 ರಿಂದ 7ನೇ ತರಗತಿ) :
ಖತಿಜ ನಾದಿಯಾ – (ಹಿಂದಿ ಕಂಠಪಾಠ – ಪ್ರಥಮ), ಫಾತಿಮಾ ಅಝ್ಮೀನ್ – (ಇಂಗ್ಲೀಷ್ ಕಂಠಪಾಠ – ಪ್ರಥಮ), ಶೇಖ್ ಮುಹಮ್ಮದ್ ಸಫಾನ್ – ಧಾರ್ಮಿಕ ಪಠಣ (ಅರೇಬಿಕ್ – ಪ್ರಥಮ), ಶಝ್ಪ ಫಾತಿಮಾ –( ಮಿಮಿಕ್ರಿ – ದ್ವಿತೀಯ), ಫಾತಿಮಾ ಆಲಿಯಾ –( ಕಥೆ ಹೇಳುವುದು – ತೃತೀಯ), ಫಾತಿಮಾ ಮಾಹಿರಾ –( ದೇಶಭಕ್ತಿ ಗೀತೆ – ತೃತೀಯ), ಸಲ್ಮಾನ್ ಫಾರಿಶ್ – (ಇಂಗ್ಲೀಷ್ ಕಂಠಪಾಠ – ತೃತೀಯ), ಹಸನ್ ಶಹೀರ್ –( ಚಿತ್ರಕಲೆ – ತೃತೀಯ), ಮುಹಮ್ಮದ್ ತಹ್ಸೀನ್ – (ದೇಶಭಕ್ತಿ ಗೀತೆ – ತೃತೀಯ), ಲುತೈಪ ಫಾತಿಮಾ- (ಆಶುಭಾಷಣ – ತೃತೀಯ).
ಇತರ ಸ್ಪರ್ಧಿಗಳಾದ ಶಾಯಿಸ್ತ ಬಾನು, ನಝ್ಲಿ ಫಾತಿಮಾ, ಮುಹಮ್ಮದ್ ಇಬ್ರಾಹಿಂ ಶವಾಯಿಝ್, ಫಾತಿಮ ಶೈಮ, ಮುಹಮ್ಮದ್ ಸೈಹಾನ್, ಆಯಿಷತುಲ್ ಶಿಫಾ, ಅಸ್ಮ ಫಾತಿಮಾ, ಆಯಿಷ ಶನುಮ್, ರಝ ಫಾತಿಮ ಸಾಧನೆಗೈದಿರುವುದಾಗಿ ಪ್ರಕಟನೆ ತಿಳಿಸಿದೆ.
ಸಾಧಕ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕಿ ಕಲಂದರ್ ಬೀವಿ, ಶಿಕ್ಷಕಿಯರಾದ ಶಿವಾನಿ, ಸಿಂಥಿಯಾ ಹಾಗೂ ಶಂಸುದ್ದೀನ್ ಹುದವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು.







