ನ.18ರಂದು ಹಿದಾಯ ಫೌಂಡೇಶನ್ ಮಹಿಳಾ ಘಟಕದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಸಾಂದರ್ಭಿಕ ಚಿತ್ರ (AI)
ಮಂಗಳೂರು: ಹಿದಾಯ ಫೌಂಡೇಶನ್ ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಹಯೋಗದಲ್ಲಿ ನ.18ರಂದು ಅತ್ತಾವರ ಆ್ಯಪಲ್ ಮಾರ್ಟ್ ಮುಂಭಾಗದಲ್ಲಿರುವ ಎಪಿಸೆಂಟ್ನಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30 ರತನಕ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣಾ ಶಬಿರ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಜಮೀಲಾ ಖಾದರ್ ವಹಿಸಲಿದ್ದಾರೆ. ಶಿರಿನ್ ಬಾವ ಉದ್ಘಾಟಿಸಲಿದ್ದಾರೆ. ಯೆನೆಪೊಯ ವಿವಿಯ ಡೈರೆಕ್ಟರ್ ಡಾ.ಅಶ್ವಿನಿ ಎಸ್. ಶೆಟ್ಟಿ ಭಾಗವಹಿಸಲಿದ್ದಾರೆ. ಡಾ. ಆಯೆಷಾ ಸಫೂರ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಲಿದ್ದಾರೆ. ಈ ಶಿಬಿರದಲ್ಲಿ ಮೆಮೊಗ್ರಫಿ ಪರೀಕ್ಷೆ, ಕಣ್ಣಿನ ಪರೀಕ್ಷೆ, ಬಿಪಿ, ಶುಗರ್ ಪರೀಕ್ಷೆ ನಡೆಯಲಿದೆ. ಶಿಬಿರವನ್ನು ಮಹಿಳೆಯರಿಗಾಗಿ ಮಾತ್ರ ಏರ್ಪಡಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
Next Story





