ಜಿ.ಹಸನಬ್ಬ ನಿಧನ

ಮಂಗಳೂರು: ಗುರುಪುರ ಜಂಕ್ಷನ್ ಬಳಿ ನಿವಾಸಿ ಜಿ.ಹಸನಬ್ಬ(68) ಅವರು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ನಾಲ್ವರು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಗುರುಪುರದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಜಿ.ಹಸನಬ್ಬ 'ವಾರ್ತಾಭಾರತಿ' ಪತ್ರಿಕೆಯ ವಿತರಕರೂ ಆಗಿದ್ದರು.
ಮೃತದೇಹದ ಅಂತಿಮ ದರ್ಶನಕ್ಕೆ ಗುರುಪುರದ ಮನೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ದಫನ ಕಾರ್ಯವು ಗುರುಪುರದ ದಾರುಸ್ಸಲಾಂ ಮಸೀದಿಯ ವಠಾರದಲ್ಲಿ ಇಂದು(ಆ.9) ಲುಹರ್ ನಮಾಝ್ ಬಳಿಕ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





