ಗಡಿಯಾರ: ಸಮಸ್ತ 100ನೇ ವಾರ್ಷಿಕ ಪ್ರಚಾರ, ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಗಡಿಯಾರ ಶಾಖೆ ವತಿಯಿಂದ ಸಮಸ್ತ 100ನೇ ವಾರ್ಷಿಕ ಪ್ರಚಾರ ಹಾಗೂ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಜ.24ರಂದು ಗಡಿಯಾರ ಶಂಶುಲ್ ಉಲಮಾ ನಗರ (ಡಿ.ಪಿ. ಮೈದಾನ)ದಲ್ಲಿ ನಡೆಯಲಿದೆ.
ಸಮಸ್ತದ ಹಿರಿಯ ಉಮರಾ ನಾಯಕ ಹಾಜಿ ಯೂಸುಫ್ ಹುಸೈನ್ ಬುಡೋಳಿ ಧ್ವಜಾರೋಹಣ ನೆರವೇರಿಸಲಿದ್ದು, ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್ ನೇತೃತ್ವದಲ್ಲಿ ಶಂಶುಲ್ ಉಲಮಾ ಮೌಲಿದ್ ನಡೆಯಲಿದೆ.
ಮಗ್ರಿಬ್ ನಮಾಜಿನ ಬಳಿಕ ನಡೆಯುವ ಕಾರ್ಯಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ಗಡಿಯಾರ ಶಾಖಾಧ್ಯಕ್ಷ ಹಂಝ ಗಡಿಯಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಸಯ್ಯದ್ ಅಕ್ರಂ ಅಲಿ ತಂಗಳ್ ದುಆ ಹಾಶೀರ್ವಚನ ನೀಡಲಿದ್ದು, ಎ.ಎಸ್. ಮುಹಮ್ಮದಲಿ ದಾರಿಮಿ ಉದ್ಘಾಟಿಸಲಿದ್ದಾರೆ.
ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಕನ್ವಿನರ್ ಪಿ.ಜೆ. ಅಬ್ದುಲ್ ಅಝೀಝ್ ಹಾಗೂ ಪ್ರಧಾನ ಕಾರ್ಯದರ್ಶಿ ಸನಾವುಲ್ಲಾ ಗಡಿಯಾರ ತಿಳಿಸಿದ್ದಾರೆ.
Next Story





