ಜ. 18 ರಂದು ಜೋಕಟ್ಟೆಯಲ್ಲಿ ಸಮಸ್ತ ಸಮ್ಮೇಳನ

ಮಂಗಳೂರು, ಜ.15: ಮಂಗಳೂರು ವೆಸ್ಟ್ ರೇಂಜ್ ಜಂಹಿಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ಇದರ ಜಂಟಿ ಆಶ್ರಯದಲ್ಲಿ, ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಜೋಕಟ್ಟೆ ಹೊಸ ಮಸೀದಿ ವಠಾರದಲ್ಲಿ 2026 ಜನವರಿ 18 ರಂದು (ಆದಿತ್ಯವಾರ) ಮಗ್ರಿಬ್ ನಮಾಜ್ ನಂತರ ಸಮಸ್ತ ಸಮ್ಮೇಳನ ನಡೆಯಲಿದೆ.
ಈ ಪ್ರಯುಕ್ತ, ಅದೇ ದಿನ ಅಸರ್ ನಮಾಜ್ ನಂತರ ಜೋಕಟ್ಟೆ ಹಳೆಯ ಮಸೀದಿಯಿಂದ ಈದ್ಗಾ ಮಸೀದಿ ತನಕ ದಫ್, ಸ್ಕೌಟ್, ಫ್ಲವರ್ ಶೋ ಮುಂತಾದ ಕಾರ್ಯಕ್ರಮಗಳೊಂದಿಗೆ ಸಮಸ್ತ ಸಂದೇಶ ಜಾಥಾ ನಡೆಯಲಿದೆ.
ಮಗ್ರಿಬ್ ನಮಾಜ್ ನಂತರ ನಡೆಯಲಿರುವ ಸಮಸ್ತ ಸಮ್ಮೇಳನವು ವೈಟ್ ಸ್ಟೋನ್ ಮಾಲಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಶರೀಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಕೇರಳದ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಭಾಷಣ ನೀಡಲಿದ್ದು, ಮಂಗಳೂರು ವೆಸ್ಟ್ ರೇಂಜ್ ಜಂಹಿಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಫಝಲ್ ರಹ್ಮಾನ್ ನಿಝಾಮಿ ಅಲ್ ಫಾರೂಕಿ ಪಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೌದಿ ಅರೇಬಿಯಾದ ಅಲ್ ಮುಝಯಿನ್ ಕಂಪನಿ ಮಾಲಕರಾದ ಹಾಜಿ ಬಿ.ಎಂ. ಝಕರಿಯಾ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಳೆಯ ಮಸೀದಿ ಖತೀಬ್ ಯೂಸುಫ್ ಮಿಸ್ಬಾಹಿ, ಮುದರ್ರಿಸ್ ಅಬ್ದುರಹ್ಮಾನ್ ದಾರಿಮಿ, ದಕ್ಷಿಣ ಕನ್ನಡ ಜಿಲ್ಲಾ ಜಂಹಿಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ, ಈದ್ಗಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಹನೀಫಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಮುದರ್ರಿಬ್ ತಾಜುದ್ದೀನ್ ರಹ್ಮಾನಿ, ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ದ.ಕ. ಜಿಲ್ಲಾ ಅಧ್ಯಕ್ಷ ಎಂ.ಎಚ್. ಮೊಯಿದಿನಬ್ಬ, ಹಳೆಯ ಮಸೀದಿ ಅಧ್ಯಕ್ಷ ಅಬ್ದುಲ್ ರಶೀದ್ ಕೊಪ್ಪ, ಒ.ಎಂ. ಅಬ್ದುಲ್ ಕಾದರ್, ಅಂಜುಮನ್ ವಿದ್ಯಾ ಸಂಸ್ಥೆ ಅಧ್ಯಕ್ಷ ಹಾಜಿ ಸುಲೈಮಾನ್ ಬೊಟ್ಟು, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಮರುಲ್ ಫಾರೂಕ್, ಮಂಗಳೂರು ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯ ಹಾಗೂ ಕಾರ್ಪೊರೇಟರ್ ಜನಾಬ್ ಮುನೀಬ್ ಬೆಂಗರೆ, ಮಂಗಳೂರು ವೆಸ್ಟ್ ರೇಂಜ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಬಿಲಾಲ್ ಮೊಯಿದಿನ್ ಬೆಂಗರೆ, ತಣ್ಣೀರುಬಾವಿ ಮಸೀದಿ ಅಧ್ಯಕ್ಷ ಅಬ್ದುಲ್ ರಾಝಿಕ್, ಬೆಂಗರೆದೋಟ ಮಸೀದಿ ಅಧ್ಯಕ್ಷ ಅಬ್ದುಲ್ ರೌಫ್, ಕಳವಾರು ಜುಮಾ ಮಸೀದಿ ಅಧ್ಯಕ್ಷ ಬಿ. ಆದಂ, ಕೆ.ಕೆ. ಅಬ್ದುಲ್ ಕಾದರ್ (ಜೋಕಟ್ಟೆ), ಮಂಗಳೂರು ವೆಸ್ಟ್ ರೇಂಜ್ ಜಂಹಿಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಹಲೀಮ್ ಆರ್ಶದಿ ಸೇರಿದಂತೆ ಅನೇಕ ಉಲಮಾ, ಉಮರಾ ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 7:00ಕ್ಕೆ ವಲಿಯುಲ್ಲಾಹಿ ಶೇಕಾಜಿ ಮಖಾಂ ಝಿಯಾರತ್, 7:30ಕ್ಕೆ ವಲಿಯುಲ್ಲಾಹಿ ಸೀವಾ ಇಮಾಮ್ ಮಖಾಂ ಝಿಯಾರತ್, 8:30ಕ್ಕೆ ಹೊಸ ಮಸೀದಿ ವಠಾರದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಶರೀಫ್ ಹಾಜಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಪಿ.ಎಂ. ಅಬ್ದುಲ್ಲಾಹಿ ನಈಮಿ ಅಲ್ ಮುರ್ಷಿದಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







