GHM ಫೌಂಡೇಶನ್: ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: GHM ಫೌಂಡೇಶನ್ (ರಿ) ಕಳೆದ 7 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟಂಬಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಯನ್ನು ಹಮ್ಮಿಕೊಂಡು ಬಂದಿದ್ದು, ಈ ಸಂಸ್ಥೆಯ 2025 ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಮ್.ಬಿ.ಇಸ್ಮಾಯಿಲ್ ಶಾಫಿ, ಉಪಾಧ್ಯಕ್ಷರಾಗಿ ಅಶ್ರಫ್ ಕೂಟೇಲ್, ಪ್ರಧಾನ ಕಾರ್ಯದರ್ಶಿಯಾಗಿ ಸಜೀವುದ್ದೀನ್ ಎಮ್.ಎಸ್, ಜೊತೆ ಕಾರ್ಯದರ್ಶಿಯಾಗಿ ತೌಹೀದ್ ಎಮ್.ಬಿ. ಹಾಗೂ ಕೋಶಾಧಿಕಾರಿಯಾಗಿ ಮೊಹಮ್ಮದ್ ಶಾಲಿ ಆಯ್ಕೆಯಾಗಿರುತ್ತಾರೆ.
ಸಂಸ್ಥೆಯ ಗೌರವ ಸಲಹೆಗಾರರಾಗಿ ಸ್ಥಾಪಕಾಧ್ಯಕ್ಷ ಹಂಝ ಎ., ಹಾಜಿ ಅಶ್ರಫ್ ಎಮ್.ಬಿ., ಝಕರಿಯಾ ಫರ್ವಿಝ್, ಲತೀಫ್ ಬಾವ, ಶರೀಫ್ ಎ.ಜಿ. ಹಾಗೂ ಕಾನೂನು ಸಲಹೆಗಾರರಾಗಿ ಅನ್ಸಾರ್ ಎಸ್. ಮತ್ತು ತಂಡದ ಮುಖ್ಯಸ್ಥರಾಗಿ ಅಝೀಝ್ ಕೊಳತ್ತಮಜಲು, ಸಿರಾಜ್ ಅಹಮ್ಮದ್ ವಾರಟೀಲು, ಮುನೀರ್ ಅಝಾದ್‍ನಗರ, ಸಂಘಟಕರಾಗಿ ಶಾರೂಖ್ ಎಮ್.ಬಿ., ಸದಕತುಲ್ಲ ಎಂ.ಜಿ ಮತ್ತು ಸಂಸ್ಥೆಯ ಯೋಜನೆ ಹಾಗೂ ಕಾರ್ಯಕ್ರಮ ಮುಖ್ಯಸ್ಥರಾಗಿ ರಶೀದ್ ಎಮ್.ಬಿ., ಸಂಯೋಜಕ ರಾಗಿ ನಿಸಾರ್ ಎ.ಜಿ, ಸಪೀಮ್, ನೌಶಾದ್ ಮಾರ್ಗದಂಗಡಿ, ರಫೀಕ್ ಬಾಲಿಕೆ, ಸಫ್ವಾನ್ ವಾರಟೀಲು, ಡಾಟಾ ಮತ್ತು ಇನ್ಫಾರ್ಮೇಶನ್ ತಂಡದ ಮುಖ್ಯಸ್ಥರಾಗಿ ಕಬೀರ್ ಎಂ.ಪಿ., ಶರೀಫ್ ದುಬೈ, ಡಾಟಾ ಆಪರೇಟರ್ ಆಗಿ ಸಾಹುಲ್ ಹಮೀದ್ ಹಾಗೂ ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಮನ್ಸೂರ್ ಹಿತ್ತಿಲು ಆಯ್ಕೆಯಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.





