ಸುಶೀಲ್ ಕುಮಾರ್ ಸಿಂಗ್ ಅವರಿಗೆ ನವ ಮಂಗಳೂರು ಬಂದರು ಪ್ರಾಧಿಕಾರದ ಹೆಚ್ಚುವರಿ ಹೊಣೆ

ಸುಶೀಲ್ ಕುಮಾರ್ ಸಿಂಗ್ (Photo credit: indiaseatradenews.com)
ಮಂಗಳೂರು: ಕೇಂದ್ರ ಸರಕಾರವು ಗುಜರಾತಿನ ದೀನದಯಾಳ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಅವರಿಗೆ ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಅಧ್ಯಕ್ಷರ ಹೆಚ್ಚುವರಿ ಹೊಣೆಯನ್ನು ವಹಿಸಿ ಆದೇಶಿಸಿದೆ.
ಸಿಂಗ್ ಅವರು 2025,ಡಿ.1ರಂದು ಅಧಿಕಾರವನ್ನು ಸ್ವೀಕರಿಸಲಿದ್ದು, ಆರು ತಿಂಗಳು ಅವಧಿಗೆ ಅಥವಾ ನೂತನ ಅಧ್ಯಕ್ಷರ ನೇಮಕಾತಿವರೆಗೆ ಅಥವಾ ಮುಂದಿನ ಆದೇಶದವರೆಗೆ,ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತಾರೆ.
ಆದೇಶದ ಪ್ರಕಾರ, ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಯ ನಿರೀಕ್ಷೆಯೊಂದಿಗೆ ಸಿಂಗ್ ಅವರಿಗೆ ಹೆಚ್ಚುವರಿ ಹೊಣೆಯನ್ನು ವಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿಯೋಜನೆಯು ಬಂದರು, ನೌಕಾ ಸಾರಿಗೆ ಮತ್ತು ಜಲಮಾರ್ಗಗಳ ಸಚಿವರ ಒಪ್ಪಿಗೆಯನ್ನು ಪಡೆದುಕೊಂಡಿದೆ.
Next Story





