ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

ಮೂಡುಬಿದಿರೆ : ಸಮಾಜ ಸೇವಕ, ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಮೂಡುಮಾನಾ೯ಡಿನ ನಿವಾಸಿ ಶ್ರೀನಾಥ್ ಸುವಣ೯ (47) ಅವರ ಮೃತದೇಹವು ಸ್ಮಶಾನಕ್ಕಾಗಿ ಮೀಸಲಿಟ್ಟ ಪಡ್ಡೇಲು ಎಂಬ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.
ಕಳೆದ ಹಲವು ವಷ೯ಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದ ಶ್ರೀನಾಥ್ ಸುವರ್ಣ ಅವರು ನಂತರ ಪಡುಮಾನಾ೯ಡು ಗ್ರಾ. ಪಂ.ನಲ್ಲಿ ಸ್ಪಧಿ೯ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಸದಸ್ಯರಾಗಿದ್ದ ಅವರು ಅವರೇ ಹೆಚ್ಚು ಆಸಕ್ತಿ ವಹಿಸಿ ಅವರದ್ದೇ ವಾಡಿ೯ನಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಪಡ್ಡೇಲು ಎಂಬ ಜಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಸ್ಥಳದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ನಿಮಾ೯ಣಗೊಂಡಿರುವ ಟ್ಯಾಂಕ್ ನ ಸ್ಟೇರ್ ಕೇಸ್ ಗೆ ಹಗ್ಗವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಸಮಾಜಸೇವೆಯ ಮೂಲಕವೂ ಗುರುತಿಸಿಕೊಂಡಿದ್ದ ಅವರು ಮೂಡುಮಾನಾ೯ಡು ಪ್ರಾಥಮಿಕ ಶಾಲೆಗಾಗಿ ಅಡಿಕೆ ತೋಟವನ್ನು ಶಾಲೆಯ ಆವರಣದಲ್ಲಿ ನಿಮಿ೯ಸಿದ್ದರು.
ಬೆಳುವಾಯಿ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದ ಹಲವಾರು ಸಮಾಜ ಸೇವೆಗಳನ್ನು ಮಾಡಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ತಾಯಿ, ಸಹೋದರರು ಹಾಗೂ ಬಂಧು ಮಿತ್ರರನ್ನು ಆಗಲಿದ್ದಾರೆ.





