ಗಲ್ಫ್ ರಿಟಾಯರೀಸ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

ಮಂಗಳೂರು: ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಕಂಕನಾಡಿ ಜಮೀಯತುಲ್ ಫಲಾಹ ಸಭಾಂಗಣದಲ್ಲಿ ಮಿತ್ತೂರು ಹಂಝ ಇವರ ಅಧ್ಯಕ್ಷತೆಯಲ್ಲಿ ಜು.29 ರಂದು ನಡೆಯಿತು.
ಜೊತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಜಮಾಲುದ್ದೀನ್ ವರದಿ ವಾಚಿಸಿದರು. ಕೋಶಾಧಿಕಾರಿ ಅಬ್ದುಲ್ ಖಾದರ್ ಬಾವಾ ಲೆಕ್ಕಪತ್ರ ಮಂಡಿಸಿದರು.
2025-27 ನೇ ಸಾಲಿನ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಹಂಝ ಮಿತ್ತೂರು, ಅಧ್ಯಕ್ಷರಾಗಿ ಶಾಹುಲ್ ಹಮೀದ್ ತಂಙಳ್, ಕಾರ್ಯದರ್ಶಿಯಾಗಿ ಮೆಲ್ವಿನ್ ಲೋಬೊ, ಉಪಾಧ್ಯಕ್ಷರಾಗಿ ಆದಂ ಬ್ಯಾರಿ, ಮುಹಮ್ಮದ್ ಹುಸೈನ್ ಆರಕಿ, ಅಬ್ದುಲ್ ಹಮೀದ್ ಉಚ್ಚಿಲ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಬಾವಾ, ಜೊತೆ ಕಾರ್ಯದರ್ಶಿಯಾಗಿ ಯೂಸುಫ್ ಆಲಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರೀತೇಶ್ ಕುಮಾರ್, ಬಶೀರ್ ಅಹಮದ್, ಇಬ್ರಾಹಿಂ ಜೋಗಿಬೆಟ್ಟು,ಇಸ್ಮಾಯಿಲ್ ಶರೀಫ್ ಮತ್ತು ಅಬ್ದುಲ್ ರಝಾಕ್ ಮುಟ್ಟಿಕಲ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಪ್ರಧಾನ ಸಲಹೆಗಾರರಾದ ಮುಹಮ್ಮದ್ ಬ್ಯಾರಿ ಬೊಳ್ಳಾಯಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
ಅಥಿತಿಗಳಾಗಿ ತಯ್ಯೂಬ್ ಸಾಲ್ಮರ, KKMA ಪದಾಧಿಕಾರಿಗಳಾದ ಅಯೂಬ್, ಇಕ್ಬಾಲ್, ಮತ್ತು ರಹ್ಮಾನ್ ಖಾನ್ ಭಾಗವಹಿಸಿದ್ದರು.





