ಗುರುಪುರ | ಸಾಲೆ ಕೇಂದ್ರ ಜುಮಾ ಮಸೀದಿ ಉಳಾಯಿಬೆಟ್ಟು ಮದರಸದಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ

ಗುರುಪುರ : ಗುರುಪುರದ ಸಾಲೆ ಉಳಾಯಿಬೆಟ್ಟು ಕೇಂದ್ರ ಮದರಸದಲ್ಲಿ ಸಮಸ್ತದ ನೂರನೇ ವಾರ್ಷಿಕ ಸ್ಥಾಪಕ ದಿನಾಚರಣೆ ಶುಹೂದ್ ವಲಿಯುಲ್ಲಾಹಿ ಮಖಾಂ ಝಿಯಾರತಿನೊಂದಿಗೆ ಆರಂಭಿಸಲಾಯಿತು.
ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ನೆರವೇರಿಸಿದರು. ಮದರಸ ಮುಖ್ಯ ಅಧ್ಯಾಪಕರಾದ ಶರೀಫ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಗಲಿದ ಸಮಸ್ತ ನೇತಾರರನ್ನು ಸ್ಮರಿಸಿದರು. ಸಂದೇಶ ಭಾಷಣ ಜಮಾಅತ್ ಖತೀಬರಾದ ನಝೀರ್ ಅಝ್ಹರಿ ಬೊಳ್ಮಿನಾರ್ ನೆರವೇರಿಸಿ ಸಮಸ್ತದ ಕಾರ್ಯಚಟುವಟಿಕೆಗಳು ಮತ್ತು ಸಮಸ್ತದ ಇತಿಹಾಸಗಳ ಬಗ್ಗೆ ಬೆಳಕು ಚೆಲ್ಲಿದರು.
ಸಭೆಯಲ್ಲಿ ಜಮಾಅತ್ ಕಾರ್ಯದರ್ಶಿ ಅಯ್ಯೂಬ್, ಉಪಾಧ್ಯಕ್ಷರಾದ ಅಬ್ದುಲ್ ರಶೀದ್, ಕೋಶಾಧಿಕಾರಿ ಮುಹಮ್ಮದ್ ಶರೀಫ್, ಎಸ್ ಕೆ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಮುನೀರ್ ಪೈಝಿ, ಉರೂಸ್ ಕಮೀಟಿ ಮಾಜಿ ಉಪಾಧ್ಯಕ್ಷರಾದ ಹಮ್ಮಬ, ಸಮಸ್ತ ಕಾರ್ಯಕರ್ತರಾದ ಶಾಹುಲ್, ಅಶ್ಫಾಖ್, ಸಾಬಾ, ಮಾಜಿ ಖಜಾಂಜಿ ಇಸ್ಮಾಯಿಲ್ ತೋಟ, ಮೊಯಿದಿನ್ ಅಂಗಡಿ, ಮಾಜಿ ಕಾರ್ಯದರ್ಶಿ ಕೋಯಮೋನು, ಪರಾರಿ ಅಬ್ದುರ್ರಹ್ಮಾನ್ ಹಾಜಿ, ಇಬ್ರಾಹಿಂ, ಹುಸೈನಾಕ, ನವಾಝ್, ಸರಫರಾಝ್, ಶಾಝಿಲ್, ವೆನಲಾಕ್ ಅಶ್ರಫ್, ಮನ್ಸೂರ್, ರಫೀಕ್, ಮಸೀದಿ ಸೇವಕರಾದ ಮೈದು, ಎಸ್ ಕೆ ಎಸ್ ಬಿ ವಿ ನಾಯಕರಾದ ಹನ್ನಾನ್, ಅಸೀಲ್ ಮತ್ತಿತರರು ಉಪಸ್ಥಿತರಿದ್ದರು.
ಕ್ವಿಝ್ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜಯಿಗಳಾದವರಿಗೆ ಎಸ್ ಕೆ ಎಸ್ ಎಸ್ ಎಫ್ ಉಳಾಯಿಬೆಟ್ಟು ಶಾಖೆಯ ವತಿಯಿಂದ ಬಹುಮಾನ ವಿತರಿಸಲಾಯಿತು. ಎಸ್ ಕೆ ಎಸ್ ಬಿ ವಿ ಖಿದ್ಮಾ ಕೋರ್ಡಿನೇಟರ್ ಮರ್ವಾನ್ ನೇತ್ರತ್ವದಲ್ಲಿ ಮದರಸ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ರಫೀಕ್ ಜಿ ಯವರಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಮದೀನಾ ಮಸೀದಿ ಇಮಾಮರಾದ ಝಮೀರ್ ಅನ್ಸಾರಿ ಸ್ವಾಗತಿಸಿ ಅಧ್ಯಾಪಕರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಬಣಕಲ್ ವಂದಿಸಿದರು.







