ಗುರುಪುರ | ಎಸೆಸೆಲ್ಸಿ ಪರೀಕ್ಷೆ: ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಗುರುಪುರ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕುಳಿಪಾಡಿ ಗುರುಪುರ ಇಲ್ಲಿನ ವಿದ್ಯಾರ್ಥಿನಿ ಮಿಸ್ಬಾ 603 (96.48) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇರುವೈಲು ಬರ್ಕೆ ಇದ್ದಿನಬ್ಬ ಮತ್ತು ಬಂಟ್ವಾಳ ಕೋಡಪದವು ಡಿ.ಕೆ.ಇಬ್ರಾಹಿಂ (ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ) ರವರ ಮೊಮ್ಮಗಳಾದ ಮಿಸ್ಬಾ ಅವರು ಗಂಜಿಮಠ ಸುಲೈಮಾನ್ ಮತ್ತು ಸಫಾನ ಡಿ.ಕೆ. ದಂಪತಿಯ ಪುತ್ರಿಯಾಗಿದ್ದಾರೆ.
ಪರೀಕ್ಷೆಗೆ ಹಾಜರಾಗಿರುವ 50 ವಿದ್ಯಾರ್ಥಿಗಳಲ್ಲಿ 9 ಡಿಸ್ಟಿಂಕ್ಷನ್, 24 ಪ್ರಥಮ ಶ್ರೇಣಿಯಲ್ಲಿ ಮತ್ತು 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಜಿ.ಎಂ.ಸಿ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಕುಟುಂಬಸ್ಥರು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Next Story





