ಗುರುಪುರ: ನದಿಗೆ ಹಾರಿ ಬಸ್ ಕಂಡಕ್ಟರ್ ಆತ್ಮಹತ್ಯೆ

ಗುರುಪುರ: ನದಿಗೆ ಹಾರಿ ಬಸ್ ಕಂಡಕ್ಟರ್ ವೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದವರು ಸೆಲಿನಾ ಬಸ್ ಕಂಡಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದ ಸಲಾಂ ಎಂದು ತಿಳಿದು ಬಂದಿದೆ.
ಸಲಾಂ ಅವರ ಬೈಕ್, ಮೊಬೈಲ್, ವಾಚ್ ಗುರುಪುರ ನದಿ ಬಳಿ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜುಗಾರರ ತಂಡದ ಸಹಕಾರದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದೆ.
Next Story





