ಹಳೆಯಂಗಡಿ : ಅಂಬೇಡ್ಕರ್ ಯುವ ಸೇನೆಯಿಂದ ಬಾಲಾಪರಾಧಗಳ ಮಾಹಿತಿ, ಕಾನೂನು ಅರಿವು ಕಾರ್ಯಕ್ರಮ

ಹಳೆಯಂಗಡಿ: ಅಂಬೇಡ್ಕರ್ ಯುವ ಸೇನೆ ಉಡುಪಿ ಜಿಲ್ಲೆ, ಅಂಬೇಡ್ಕರ್ ಯುವ ಸೇನೆ ಮುಲ್ಕಿ ತಾಲೂಕು ಘಟಕ ಮತ್ತು ಅಂಬೇಡ್ಕರ್ ಯುವ ಸೇನೆ ಮಹಿಳಾ ಘಟಕ ಮುಲ್ಕಿ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಬಾಲಾಪರಾಧಗಳ ಬಗ್ಗೆ ಮಾಹಿತಿ ಮತ್ತು ಕಾನೂನು ಅರಿವು ಕಾರ್ಯಕ್ರಮವು ಹಳೆಯಂಗಡಿ ಇಂದಿರಾನಗರದ ಇಂದಿರಾಗಾಂಧಿ ಸಭಾಭವನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಅವರು, ಬಾಲಾಪರಾಧಗಳ ಬಗ್ಗೆ ಹಳೆಯಂಗಡಿಯಲ್ಲಿ ಪ್ರಥಮ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ.
ಪೋಷಕರ ಮಕ್ಕಳ ಎದುರಿನಲ್ಲಿ ಮನೆಯಲ್ಲಿ ಮಾಡುವ ಗಲಾಟೆಗಳು, ಬಡತನ, ಕೆಟ್ಟ ಗೆಳೆಯರ ಸಹವಾಸದಿಂದ ಮತ್ತು ಮೊಬೈಲ್ ಛಾಳಿಯಿಂದಲೂ ಮಕ್ಕಳು ಬಾಲಾಪರಾಧಗಳಾಗಿ ಬದಲಾಗುವಂತಾಗುತ್ತಿದೆ ಎಂದು ನುಡಿದರು.
ಇದರಿಂದ ಮಕ್ಕಳನ್ನು ಕಾಪಾಡಿಕೊಳ್ಳಬೇಕಾದಲ್ಲಿ ಎಲ್ಲಾ ಪೋಷಕರು ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು. ಮೊಬೈಲ್ ಗಳಿಂದ ದೂರ ಇಡಬೇಕು ಅಥವಾ ಮಕ್ಕಳ ಮೊಬೈಲ್ ಗಳ ಮೇಲೆ ಪೋಷಕರು ಗಮನಹರಿಸಬೇಕು. ಮಕ್ಕಳನ್ನು ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಬಾಲಾಪರಾಧಗಳನ್ನು ತಡೆಗಟ್ಟಬಹುದು ಎಂದು ಅವರು ನುಡಿದರು.
ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಉಮೇಶ್ ಕುಮಾರ್ ಮತ್ತು ವಕೀಲರಾದ ರಾಜೇಶ್ ಪಡುಬಿದ್ರಿ ಅವರು ಬಾಲಾಪರಾಧ ಮತ್ತು ಕಾನೂನು ಕುರಿತು ಮಾಹಿತಿ ನೀಡಿದರು.
ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆ ಗೌರವಾಧ್ಯ ಕೃಷ್ಣ ಬಂಗೇರ ಅವರು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಲ್ಕಿ ತಾಲೂಕು ಮಹಿಳಾ ಘಟಕಾಧ್ಯಕ್ಷೆ ಸುಮಿತ್ರಾ ಅಧ್ಯಕ್ಷತೆ ವಹಿಸಿದ್ದರು.
ಕಾಪು ಶಾಖೆ ಅಧ್ಯಕ್ಷರಾದ ವಸಂತ ಪಡುಬಿದ್ರೆ, ಸುಜಿತ್ ಪಡುಬಿದ್ರೆ, ಮುಲ್ಕಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಹೇಶ್ ಪಾಟೀಲ್, ಪಡುಪಣಂಬೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಕುಮಾರಿ ಸುಜಾತ, ಮುಲ್ಕಿ ತಾಲೂಕು ಅಂಬೇಡ್ಕರ್ ಯುವ ಸೇನೆ ಮಹಿಳಾ ಘಟಕದ ಆದ್ಯಕ್ಷೆ ಸುಮಿತ್ರಾ, ಪ್ರದಾನ ಕಾರ್ಯದರ್ಶಿ ಸುನೀತಾ, ಕೋಶಾಧಿಕಾರಿ ಕೀರ್ತಿ ಮೊದಲಾದವರು ಉಪಸ್ಥಿತರಿದ್ದರು.







