ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಮೆಡಿಕಲ್ ಬೆಡ್, ಗಾಲಿ ಕುರ್ಚಿ ಹಸ್ತಾಂತರ

ಉಳ್ಳಾಲ: ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ರೋಗಿಗಳಿಗೆ ಮೆಡಿಕಲ್ ಬೆಡ್, ಗಾಲಿ ಕುರ್ಚಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಹಸ್ತಾಂತರ ಕಾರ್ಯಕರ್ಮ ಅಜ್ಜಿನಡ್ಕ ಜಂಕ್ಷನ್ ನಲ್ಲಿ ನಡೆಯಿತು.
ಕಾರ್ಯ ಕರ್ಮದ ಅಧ್ಯಕ್ಷತೆಯನ್ನು ಟಿ.ಕೆ. ಅಬ್ದುಲ್ ಖಾದರ್ ವಹಿಸಿದ್ದರು. ಚಾರಿಟಿ ಸಂಸ್ಥೆಯ ಸಂಚಾಲಕ ಅಬ್ದುಲ್ ರಹ್ಮಾನ್ ಮದನಿ ಉದ್ಘಾಟಿಸಿದರು. ಸಿ ಎಚ್ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಹ್ಮದ್ ಅಜ್ಜಿನಡ್ಕ , ಅಹ್ಮದ್ ಎಸ್. ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಶಾಹುಲ್ ಸಾಮನಿಗೆ, ರಹೀಮ್ ಸಿ ಎಚ್, ನೌಶಾದ್ ಯು ಎನ್,ಸುಲ್ತಾನ್ ಬಿ ಎಸ್ ಟಿ, ಅಮೀರ್ ಫೈಜಲ್ ಉಪಸ್ಥಿತರಿದ್ದರು.
ಅಶ್ರಫ್ ಕೋಟೆಕಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





