ಮಂಗಳೂರಿನಲ್ಲಿ ‘ಹಿಯರ್ ಸೇ’ ಕ್ಲಿನಿಕ್ ನ ಎರಡನೆ ಶಾಖೆ ಪ್ರಾರಂಭ

ಮಂಗಳೂರು: ‘ಹಿಯರ್ ಸೇ’ ಶ್ರವಣ ಮತ್ತು ವಾಕ್ ಕ್ಲಿನಿಕ್ ತನ್ನ ಎರಡನೆ ಶಾಖೆಯನ್ನು ಸೋಮವಾರ ಮಂಗಳೂರಿನ ಯೂನಿಟಿ ಆಸ್ಪತ್ರೆ ಬಳಿಯ ಮೆಡಿಸಿಟಿಯಲ್ಲಿ ಪ್ರಾರಂಭಿಸಿದೆ.
ಡಾ. ಇಸ್ಮಾಯಿಲ್ ಎಚ್. ಅವರ ಪತ್ನಿ ಶಹೀನಾ ಈ ಕ್ಲಿನಿಕ್ ಉದ್ಘಾಟಿಸಿದರು.
ವಾಕ್ ಮತ್ತು ಭಾಷಾ ದೋಷ ಮೌಲ್ಯಮಾಪನ ಮತ್ತು ಚಿಕಿತ್ಸೆ ಸೇರಿದಂತೆ ಶ್ರವಣ ನೆರವು ಪರೀಕ್ಷೆಗಳು ಮತ್ತು ಸೇವೆಗಳನ್ನೊಳಗೊಂಡ ವೈವಿಧ್ಯಮಯ ಸೇವೆಗಳು ಈ ನೂತನ ಶಾಖೆಯಲ್ಲಿ ಲಭ್ಯವಿವೆ ಎಂದು ಕ್ಲಿನಿಕ್ ನ ಮಾಲಕ ಹಾಗೂ ಶ್ರವಣ ತಜ್ಞ ಹಸೀಬ್ ಅನ್ಫಲ್ ತಿಳಿಸಿದ್ದಾರೆ.
ಈ ಸಂದರ್ಭ ಡಾ. ಇಸ್ಮಾಯಿಲ್ ಎಚ್ ಹಾಗೂ ಡಾ. ಎನ್.ಎ.ಮುಹಮ್ಮದ್ ಹಾಜರಿದ್ದರು.
Next Story







