ಕೊಣಾಜೆ: ಭಾರೀ ಮಳೆ, ನಿಲ್ಲದ ಹಾನಿ

ಕೊಣಾಜೆ: ಭಾರೀ ಮಳೆಗೆ ಕೊಣಾಜೆ ವ್ಯಾಪ್ತಿಯ ಹಲೆವೆಡೆ ಮನೆಗಳಿಗೆ ಹಾನಿ ಸಂಭವಿಸಿದ ಘಟನೆ ನಡೆದಿದೆ.
ಕಲ್ಲುಗುಡ್ಡೆ ಹಕೀಮ್ ಅವರ ಮನೆಯ ಆವರಣ ಗೋಡೆ ಕುಸಿದು ಹಾನಿಯಾಗಿದೆ. ನಾಸಿರ್ ಕೆಎಂ ಕೋಡಿಜಾಲ್ ಅವರ ಮನೆಯ ಬಳಿ ಗುಡ್ಡ ಕುಸಿತಗೊಂಡಿತು.ಹಾಗೂ ಅಶ್ರಫ್ ಕೋಡಿಜಾಲ್ ಅವರ ಮನೆಯ ಕಾಂಪೌಂಡ್ ಕುಸಿದು ಹಾನಿಯಾಗಿದೆ. ಕೋಡಿಜಾಲ್ ಮಸೀದಿಯ ಎದುರುಭಾಗದಲ್ಲಿರುವ ರಿಯಾಝ್ ಅವರ ಹೊಸ ಮನೆಯ ಆವರಣಗೋಡೆ ಕುಸಿದು ಬಿದ್ದಿದೆ. ಮೊಂಟೆಪದವು ಬಳಿ ರೇವತಿ ಎಂಬವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಹಾನಿಯಾಗಿದೆ. ಹಾಗೂ ಮೊಂಟೆಪದವಿನಿಂದ ಪಟ್ಟೋರಿಗೆ ಹೋಗುವ ದಾರಿಯ ನಡುವಿನ ಗುಡ್ಡ ಕುಸಿದು ರಸ್ತೆ ಸಂಪರ್ಕಕ್ಕೆ ತೊಂದರೆಯಾಗಿದೆ.
Next Story





