ಸುಳ್ಯದಲ್ಲಿ ಬಾರೀ ಮಳೆ: ಹೊಳೆಯಂತಾದ ಪೈಚಾರ್ - ಬೆಳ್ಳಾರೆ ರಸ್ತೆ

ಸುಳ್ಯ: ಶುಕ್ರವಾರ ಸುಳ್ಯದಲ್ಲಿ ಭಾರೀ ಮಳೆ ಸುರಿದಿದ್ದು, ದಿನವಿಡಿ ಉತ್ತಮ ಮಳೆಯಾಗಿದೆ.
ಶುಕ್ರವಾರ ಬೆಳಿಗ್ಗೆ ಯಿಂದಲೇ ಆರಂಭಗೊಂಡ ಮಳೆ ಬಿಡುವು ನೀಡಿ ಬರುತ್ತಲೇ ಇತ್ತು. ನಿರಂತರ ಮಳೆಗೆ ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಣ್ಣಿನ ರಸ್ತೆಗಳು ಕೆಸರುಮಯವಾಗಿದೆ. ಈ ರಸ್ತೆಗಳಲ್ಲಿ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಬಹುತೇಕ ಕಡೆಗಳಲ್ಲಿ ಅಸಮರ್ಪಕ ಚರಂಡಿಗಳಿಂದ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಪೈಚಾರ್ – ಸೋಣಂಗೇರಿಯ ಮೂಲಕ ಬೆಳ್ಳಾರೆ ಸಂಪರ್ಕದ ರಾಜ್ಯ ಹೆದ್ದಾರಿಯ ಆರ್ತಾಜೆ ಎಂಬಲ್ಲಿ ಶುಕ್ರವಾರ ಸುರಿದ ಮಳೆಗೆ ಚರಂಡಿ ಮುಚ್ಚಿ ಹೋಗಿ ಮಳೆ ನೀರು ರಸ್ತೆಯಲ್ಲಿಯೇ ನಿಂತು ಹೊಳೆಯಂತಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಚರಂಡಿಯನ್ನು ದುರಸ್ತಿಗೊಳಿಸುವ ಯಾವುದೇ ಕಾರ್ಯ ಸಂಬಂದಪಟ್ಟ ಇಲಾಖೆಯವರು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
Next Story





