ದ.ಕ.ಜಿಲ್ಲೆಯಲ್ಲಿ ಮುಂದುವರಿದ ಮಳೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಶನಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮುಂಜಾನೆಯಿಂದಲೇ ಬಿರುಗಾಳಿ ಬೀಸಿದೆ. ಜೊತೆಗೆ ಮಿಂಚು, ಗುಡುಗಿನ ಅಬ್ಬರವೂ ಇತ್ತು. ಕೆಲವು ಕಡೆಗಳಲ್ಲಿ ಮರಗಳು ಉರುಳಿ ಹಾನಿಯಾಗಿವೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಇನ್ನೂ ಕೆಲವು ದಿನ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.
ಶನಿವಾರ ಮುಂಜಾನೆ 4ಕ್ಕೆ ಆರಂಭಗೊಂಡ ಮಳೆಯು 45 ನಿಮಿಷಗಳ ಕಾಲ ಮಂಗಳೂರು, ಉಳ್ಳಾಲ, ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ ಭಾಗಗಳಲ್ಲಿ ಎಡೆಬಿಡದೆ ಸುರಿಯಿತು. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಬಾಳೆ, ಅಡಕೆ ತೋಟಗಳಿಗೆ ಹಾನಿ ಸಂಭವಿಸಿದೆ.
ನಗರದ ಕದ್ರಿ ವಾರ್ಡ್‌ನ ಶಾಂತಲಾ ಅಪಾರ್ಟ್‌ಮೆಂಟ್ ಪಕ್ಕದ ತೆಂಗಿನ ಮರವೊಂದು ಬಿದ್ದು ವಿದ್ಯುತ್ ತಂತಿ ತುಂಡಾಗಿ ಕೆಲಕಾಲ ವಿದ್ಯುತ್ ಅಡಚಣೆಯಾಗಿತ್ತು. ಪಡೀಲಿನಲ್ಲಿ ರಸ್ತೆಗೆ ಮರ ಉರುಳಿತ್ತು. ತಕ್ಷಣ ಸಿಬ್ಬಂದಿ ತೆರವುಗೊಳಿಸಿದರು.
ಕೇರಳಕ್ಕೆ ಶನಿವಾರವೇ ಮುಂಗಾರು ಪ್ರವೇಶ ಮಾಡಿದೆ. 1990ರ ಬಳಿಕ ಇದೇ ಮೊದಲ ಬಾರಿಗೆ ವಾರದ ಮೊದಲು ಮುಂಗಾರು ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Next Story