ಹೊಸಬೆಟ್ಟು | ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆಗೆ ಶತಮಾನೋತ್ಸವ ಸಂಭ್ರಮ: ಕ್ರೀಡಾಕೂಟ

ಸುರತ್ಕಲ್: ಇಲ್ಲಿನ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ ಹೊಸಬೆಟ್ಟು ಇದರ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ "ನೂರರ ಸಂಭ್ರಮದ ನಮ್ಮೂರ ಕ್ರೀಡಾಕೂಟ 2025" ವು ರವಿವಾರ ಶಾಲಾ ವಠಾರದಲ್ಲಿ ನಡೆಯಿತು.
ಸುರತ್ಕಲ್ ಕ್ಲಸ್ಟರ್ ಸಿಆರ್‌ಪಿ ವೇಣುಗೋಪಾಲ್, ನ್ಯಾಯವಾದಿ ಗಿರೀಶ್ ಶೆಟ್ಟಿ ಶಿಬರೂರು, ಹೊಸಬೆಟ್ಟು ಮೊಗವೀರ ಸಂಘ ಗುರಿಕಾರರಾದ ಗಂಗಾಧರ ಎಚ್., ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಟಿ.ಎ. ಅವರು ಚಾಲನೆ ನೀಡಿ ಶುಭ ಹಾರೈಸಿದರು.
ಕ್ರೀಡಾಕೂಟವನ್ನು ದೀಪ ಗಂಗಾಧರ್ ಮತ್ತು ಗಂಗಾಧರ ಖಾರ್ವಿ, ಭರತ್ ಅಮಿನ್ ಅವರು ನೆರವೇರಿಸಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷರ ರವಿ ಎನ್. ಶ್ರೀಯಾನ್ ಹೊಸಬೆಟ್ಟು ಅವರು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊಗವೀರ ಸಂಘದ ಅಧ್ಯಕ್ಷ ಯೋಗೀಶ್ ಆರ್.ಕರ್ಕೇರ, ಉಪಾಧ್ಯಕ್ಷ ಚಂದ್ರ ಹಾಸ ಸುವರ್ಣ, ಪ್ರವೀಣ್ ಸಾಲಿಯಾನ್, ಶರತ್ ಕರ್ಕೇರ, ದಿನೇಶ್ ಕಾಂಚನ್, ಪುರಂದರ ಗುರಿಕಾರ, ಮಾಜಿ ಕಾರ್ಪೊರೇಟರ್ ನಯನ ಕೋಟ್ಯಾನ್, ಅಬ್ದುಲ್ ರೆಹಮಾನ್ ಇಡ್ಯಾ, ಕರುಣಾಕರ್ ಶೆಟ್ಟಿ ಮುಂಬೈ, ಮುಂಬೈ ಮೊಗವೀರ ಸಂಘ ಉಪಾಧ್ಯಕ್ಷರಾದ ರಾಮಚಂದ್ರ ಆರ್.ಕರ್ಕೆರ, ಮಹಿಳಾ ಸಮಾಜದ ಅಧ್ಯಕ್ಷರಾದ ಗಿರಿಜ ಎಸ್.ಸುವರ್ಣ, ಪ್ರೇಮಾ ಸೀತಾರಾಮ ಕಾಂಚನ್, ರಂಜನಿ ಗಿರೀಶ್, ಮಾನಸ ರವಿ, ಗಾಯತ್ರಿ ಯತೀಶ್, ಅನುಪಮ ಭರತ್, ಶೋಭಾ ಶರತ್, ಸುರೇಖಾ ದಿನೇಶ್ ಕಾಂಚನ್, ರಂಜನಿ ಗಿರೀಶ್, ದಿವ್ಯಜ್ಯೋತಿ, ಮೋಹಿನಿ ರಾಮ ಕೋಟ್ಯಾನ್, ಲೀಲಾವತಿ ವಿ. ಶ್ರೀಯನ್, ವಸಂತ ಕೋಟ್ಯಾನ್, ತುಷಾರ್ ಸಾಲಿಯಾನ್, ಫೂರ್ಣೇಶ್ ಮೆಂಡನ್, ಉಮೇಶ ಎನ್. ಪೂಜಾರಿ, ಮೋಹನ್ ಪೂಜಾರಿ, ಕರುಣಾಕರ್ ಪೂಜಾರಿ, ಜನಾರ್ಧನ್ ಪೂಜಾರಿ, ಹರಿಚಂದ್ರ ಪೂಜಾರಿ, ದಿಶಾಂತ್ ಕರ್ಕೇರ, ಸುಹಾನ್, ಜೀವನ್, ಉರ್ವ ಮಾರಿಮ್ಮ ದೇವಸ್ಥಾನ ಮಾಜಿ ಆಡಳಿತ ಮೋಕ್ತೇಸರರಾದ ಯಾದವೇಶ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.







