ಟೀಕೆ, ಟಿಪ್ಪಣಿಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ: ಯು.ಟಿ. ಖಾದರ್
ಎರಡು ವರುಷ- ಸಾವಿರ ಹರುಷ

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿ ಹುದ್ದೆಯೂ ಮಹತ್ವದ್ದು. ಸ್ಪೀಕರ್ ಸ್ಥಾನವು ಗೌರವ ಹಾಗೂ ಜವಾಬ್ದಾರಿಯ ಸಂಕೇತ. ಈ ಸ್ಥಾನದಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿರುವುದು ನನಗೆ ಹೆಮ್ಮೆ. ಈ ಅವಧಿಯಲ್ಲಿ ಟೀಕೆ, ಟಿಪ್ಪಣಿಗಳನ್ನು ನಾನು ಸದಾ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನ ಸಭೆಯ ಸ್ಪೀಕರ್ ಆಗಿ ಎರಡು ವರ್ಷ ಪೂರ್ಣಗೊಳಿಸಿರುವ ಯು.ಟಿ.ಖಾದರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸೌಂದರ್ಯ ಹೆಚ್ಚಿಸಲು, ಶಾಸಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಿಧಾನಸಭೆಯ ಗೌರವ, ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿರುವೆನು ಎಂದು ಹೇಳಿದ್ದಾರೆ.
ನನ್ನ ಕಾರ್ಯವೈಖರಿ ಬಗ್ಗೆ ಆಡಳಿತ ಮತ್ತು ವಿಪಕ್ಷ ಎರಡರಲ್ಲೂ ಸಮಾಧಾನವಿದೆ ಎಂಬ ವಿಶ್ವಾಸ ನನ್ನದು. ಜನರ ಪ್ರೀತಿಯೇ ನನ್ನ ಪ್ರೇರಣೆ ಎಂದು ಖಾದರ್ ತಿಳಿಸಿದರು.
Next Story