ಹಬ್ಬದ ಸಮಯದಲ್ಲಿ ಖಾಸಗಿ ಬಸ್ಗಳಲ್ಲಿ ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ: ಕೆ.ಟಿ. ಹಾಲಸ್ವಾಮಿ

ಕೆ.ಟಿ. ಹಾಲಸ್ವಾಮಿ
ಮಂಗಳೂರು, ಸೆ.13: ಹಬ್ಬದ ರಜಾದಿನಗಳಲ್ಲಿ ದೂರದ ಊರುಗಳಿಗೆ ಸಂಚರಿಸುವ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕ ರಿಂದ ನಿಗದಿತ ಟಿಕೆಟ್ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಶಿವಮೊಗ್ಗ ಸಾರಿಗೆ ವಿಭಾಗದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸೆ.15ರಿಂದ 18ರ ತನಕ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ತಿಳಿಸಿದ್ದಾರೆ.
ಮಂಗಳೂರು ಆರ್ಟಿಒ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ವಿಭಾಗದ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಈ ಅಭಿಯಾನ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು.
ನಿಗದಿತ ಟಿಕೆಟ್ ದರ 400 ಆಗಿದ್ದರೆ ಹಬ್ಬ ಹರಿದಿನಗಳಲ್ಲಿ ಎರಡು ಪಟ್ಟು ವಸೂಲಿ ಮಾಡುವುದು ಮತ್ತು ಇದರಲ್ಲಿ ಮಧ್ಯ ವರ್ತಿಗಳು ಸೇರಿಕೊಂಡು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಪ್ರಕರಣಗಳು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಈ ಸಂಬಂಧ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮಂಗಳೂರಿನಲ್ಲಿ 4, ಶಿವಮೊಗ್ಗದಲ್ಲಿ 2, ಪುತ್ತೂರಿನಲ್ಲಿ 2 , ಸಾಗರ 1 , ಉಡುಪಿ 4 , ದಾವಣಗೆರೆ 4, ಚಿತ್ರದುರ್ಗದಲ್ಲಿ 4 ಸಾರಿಗೆ ಇಲಾಖೆಯ ವಿಶೇಷ ತಪಾಸಣಾ ತಂಡವನ್ನು ರಚಿಸಲಾಗಿದೆ. ಪ್ರತಿಯೊಂದು ತಂಡದಲ್ಲೂ ಒಬ್ಬ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಇರ್ತಾರೆ. ಪ್ರಯಾಣಿಕರ ದೂರು, ಮಾಹಿತಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕಾಗಿ ಕಂಟ್ರೋಲ್ ರೂಮ್ ಮಾಡಲಾಗಿದೆ. ದೂರವಾಣಿ ನಂಬ್ರ 0824: 2220577 ಖಾಸಗಿ ಬಸ್ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿರುವ ಬಗ್ಗೆ ಸಾರ್ವಜನಿಕರು ಕಂಟ್ರೋಲ್ ರೂಂಗೆ ತಿಳಿಸಿದರೆ ಸ್ಕ್ವಾಡ್ ಹೋಗಿ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ಹೊರಹೋಗುವ ಖಾಸಗಿ ಬಸ್ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತದೆ. ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಕಡಿಮೆ. ಯಾಕೆಂದರೆ ಸರಕಾರಿ ಸಾರಿಗೆ ಸಂಸ್ಥೆಗೆ ಸೇರಿರುವ ಬಸ್ಗಳಲ್ಲಿ ನಡೆಯುವ ಸಾಧ್ಯತೆ ಕಡಿಮೆ. ಒಂದು ವೇಳೆ ಸರಕಾರಿ ಬಸ್ಗಳಲ್ಲಿ ಜಾಸ್ತಿ ವಸೂಲಿ ಮಾಡಿದರೂ ಸಾರಿಗೆ ಇಲಾಖೆಗೆ ಮತ್ತು ಕೆಎಸ್ಸಾರ್ಟಿಸಿ ದೂರು ನೀಡಬಹುದು ಎಂದರು.
ಹಿಂದೆ ಬೆಂಗಳೂರಿನ ತಾನು ಜಂಟಿ ಆಯುಕ್ತರಾಗಿದ್ದಾಗ ಇದೇ ರೀತಿ ಅಭಿಯಾನ ನಡೆಸಲಾಗಿತ್ತು ಎಂದು ಹೇಳಿದರು. ತಮ್ಮ ವಿಭಾಗ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಸರಕಾರಕ್ಕೆ ಬರೆಯಲಾಗಿದೆ ಎಂದ ಅವರು ನಗರದಲ್ಲಿ ಓಡಾಡುವ ಬಸ್ಸುಗಳಿಗೆ ಡೋರ್ ಕಡ್ಡಾಯವಲ್ಲ. ದೂರ ಹೋಗುವ ಬಸ್ಸುಗಳಿಗೆ ಡೋರ್ ಬೇಕು. ಬಸ್ನ ಫುಟ್ ಬೋರ್ಡ್ನಲ್ಲಿ ಯಾರು ನೇತಾಡಬಾರದು ಅಂತ ಮಾಲೀಕರು, ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮಾಡುತ್ತೇವೆ ಎಂದು ಹೇಳಿದರು.
ಸರಕಾರಿ ಕಚೇರಿಗಳಲ್ಲಿ 15 ವರ್ಷ ಮೀರಿದ ವಾಹನಗಳು ಓಡಾಡುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರು ಎಆರ್ ಟಿಒ ವಿಶ್ವನಾಥ ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







